Advertisement
ಬೆಳಗ್ಗೆ 6.30ಕ್ಕೆ ಮರವೂರು ಸೇತುವೆ ಬಳಿ ಇರುವ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರು ಸಮಾವೇಶಗೊಂಡು ಸಾಮೂಹಿಕ ಪ್ರಾರ್ಥನೆ ಬಳಿಕ 7 ಗಂಟೆಗೆ ಪಾದಯಾತ್ರೆ ಆರಂಭಗೊಳ್ಳ ಲಿದೆ. ದುರ್ಗಾದೇವಿ ಚಿತ್ರಪಟ ಹೊತ್ತ ವಾಹನದೊಂದಿಗೆ ಜಾಥಾ ಸಾಗ ಲಿದ್ದು, ಕ್ಷೇತ್ರದಲ್ಲಿ ದೇವಿ ದರ್ಶನ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾಸೋಹದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಸುಮಾರು 25,000 ಮಂದಿ ಭಾಗ ವಹಿಸಿದ್ದರು ಎಂದು ಅವರು ಹೇಳಿದರು.
ಪಾದಯಾತ್ರೆಯ 5ನೇ ವರ್ಷದ ಸೇವಾ ಅಭಿಯಾನದ ಅಂಗವಾಗಿ ಸಮಿತಿಯು “ಪಂಚಮ ನಡೆ ರಿಕ್ಷಾದ ಕಡೆ’ ಎಂಬ ವಿಶಿಷ್ಟ ಕಾರ್ಯಕ್ರಮ ವನ್ನು ಆಯೋಜಿಸಿದೆ. ಬಡ ರಿಕ್ಷಾ ಚಾಲಕರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ನೋಂದಣಿ ಪ್ರಕ್ರಿಯೆ ನಡೆಸಿದ್ದು, 150 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಫೆ. 11ರಂದು ರಿಕ್ಷಾ ಚಾಲಕರಿಗೆ ಸಹಾಯ ಧನ ವಿತರಿಸಲಾಗುವುದು. ರಿಕ್ಷಾದ ಮೇಲೆ ಮಾಡಿರುವ ಸಾಲ ಕಂತನ್ನು ತುಂಬಲು ಕಷ್ಟಪಡುತ್ತಿರುವ 50 ಮಂದಿಗೆ ತಲಾ 8,000 ರೂ. ಹಾಗೂ 100 ಮಂದಿಗೆ ತಲಾ 6,000 ರೂ.ಗಳಂತೆ ಆರ್ಥಿಕ ನೆರವು ನೀಡಲಾಗುವುದು ಸಂದೀಪ್ ಶೆಟ್ಟಿ ತಿಳಿಸಿದರು.