Advertisement

ಫೆ. 25: ಪಿಣರಾಯಿ ಆಗಮನ ವಿರೋಧಿಸಿ ಹರತಾಳ

02:13 PM Feb 21, 2017 | Team Udayavani |

ಮಂಗಳೂರು: ಮಂಗಳೂರಿನಲ್ಲಿ ಫೆ. 25ರಂದು ನಡೆಯುವ ಕೋಮು ಸೌಹಾರ್ದ ಹೆಸರಿನ ಸಾರ್ವಜನಿಕ ರ್ಯಾಲಿಯ ಉದ್ಘಾಟನೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಗಮಿಸುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಹರತಾಳಕ್ಕೆ ಕರೆ ನೀಡಿವೆ.

Advertisement

ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕೋಮುಸೌಹಾರ್ದ ಕಾರ್ಯಕ್ರಮಕ್ಕೆ ಸಂಘಟನೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆ ಕಾರ್ಯಕ್ರಮವನ್ನು ಕೇರಳ ಮುಖ್ಯಮಂತ್ರಿ ಉದ್ಘಾಟಿಸುವುದಕ್ಕೆ ತ‌ಮ್ಮ ವಿರೋಧವಿದೆ ಎಂದರು.

ಶಾಂತಿಯುತವಾಗಿ ಪ್ರತಿಭಟನೆ ದ.ಕ. ಜಿಲ್ಲೆ ಅತೀ ಸೂಕ್ಷ್ಮ ಜಿಲ್ಲೆಯಾಗಿದ್ದು, ಉದ್ಘಾಟನೆ ಬಳಿಕ ಭಾವನೆಗೆ ಘಾಸಿಯಾಗುವಂತಹ ಘಟನೆಗಳು ನಡೆದರೆ ಜಿಲ್ಲೆಯ ಶಾಂತಿ, ನೆಮ್ಮದಿ ಕದಡಲಿದೆ. ಕಳಂಕಿತ ವ್ಯಕ್ತಿಯನ್ನು ಕರೆಸಿ ಉದ್ಘಾಟಿಸಲು ಮುಂದಾಗಿರುವುದು ಅಶಾಂತಿ ಸೃಷ್ಟಿಸುವ ಉದ್ದೇಶಪೂರ್ವಕ ಕೃತ್ಯವಾಗಿದೆ. ಈ ಕುರಿತು ಪೊಲೀಸ್‌ ಇಲಾಖೆಗೆ ಮನವಿ ಮಾಡಲಾಗಿದೆ. ಸ್ವಯಂಪ್ರೇರಿತವಾಗಿ ಹರತಾಳ ನಡೆಸಲು ಕರೆ ನೀಡಲಾಗಿದ್ದು, ಅಂದು ವಿವಿಧ
ಸಂಘಟನೆಗಳ ಸಹಕಾರದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದರು.

ರಾಜಕೀಯ ಕುಖ್ಯಾತಿ
ಬಜರಂಗದಳ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌ ಮಾತನಾಡಿ, ಪಿಣರಾಯಿ ವಿಜಯನ್‌ ಅವರು ಸಿಪಿಎಂ ಪಾಲಿಟ್‌ ಬ್ಯೂರೋ ಸದಸ್ಯ. ಕೇರಳದಲ್ಲಿ ಸಿಪಿಎಂ ಪ್ರಾಯೋಜಿತ ಕೊಲೆ-ಹಿಂಸಾ ರಾಜಕೀಯ ಕುಖ್ಯಾತಿ ಪಡೆದುಕೊಂಡಿದೆ. ಸ್ವತಃ ಮುಖ್ಯಮಂತ್ರಿಗಳ ಊರಾದ ಪಿಣರಾಯಿಯಲ್ಲೇ 1968ರಿಂದ ಇದುವರೆಗೆ 12 ಕೊಲೆ ಕೃತ್ಯ ನಡೆದಿದ್ದು, ಈ ಪೈಕಿ 1969ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ವಿಜಯನ್‌ ಅಪರಾಧಿಯಾಗಿದ್ದರು ಎಂದರು.

ಇಂದಿಗೂ ಅಲ್ಲಿ ಸಿಪಿಎಂನ ಸಿದ್ಧಾಂತವನ್ನೊಪ್ಪದ ಸಂಘ ಪರಿವಾರ ಸಹಿತ ಮುಸ್ಲಿಂ, ಸಿಪಿಐ ಕಾರ್ಯ
ಕರ್ತರ ಹಲ್ಲೆ, ಕೊಲೆಗಳಾಗುತ್ತಿವೆ. ಆದರೆ ಹಿಂಸಾ ಚಾರ ತಡೆಗಟ್ಟದೇ ಕುಮ್ಮಕ್ಕು ನೀಡುತ್ತಿರುವ ವಿಜಯನ್‌ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವು ದನ್ನು ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.

Advertisement

ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಹಿಂ.ಜಾ. ವೇದಿಕೆಯ ಅಮಿತ್‌ ಕುಮಾರ್‌, ಬಜರಂಗದಳದ ಭುಜಂಗ ಕುಲಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next