Advertisement

ವಿಮಾ ಕ್ಷೇತ್ರದಲ್ಲಿ FDI ಹೆಚ್ಚಳ

01:02 AM Mar 23, 2021 | |

ದೇಶದ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪಾಲನ್ನು 49ರಿಂದ 74 ಪ್ರತಿಶತಕ್ಕೆ ಹೆಚ್ಚಿಸುವ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ಹಾಗಿದ್ದರೆ ವಿಮಾ ಕ್ಷೇತ್ರದಲ್ಲಿ ಇದರಿಂದ ಏನೇನು ಬದಲಾವಣೆ ಆಗಲಿವೆ? ಕಂಪೆನಿಗಳಿಗೆ, ಗ್ರಾಹಕರಿಗೆ ಪ್ರಯೋಜನವೇನು?

Advertisement

ಎಫ್ಡಿಐ ಹೆಚ್ಚಾಗಿ ಕಂಪೆನಿಗಳು ನಿಯಂತ್ರಣಕ್ಕೆ ಸಿಗದಿದ್ದರೆ?
ಹಾಗೆ ಆಗದಂಥ ನಿಯಮಗಳನ್ನು ರೂಪಿಸಲಾಗಿದೆ. ನವ ಪದ್ಧತಿಯಲ್ಲಿ ವಿಮಾ ಕಂಪೆ‌ನಿ ಯೊಂದರಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚು ಇದ್ದರೂ ಆ ಸಂಸ್ಥೆಗಳ ಬಹುಪಾಲು ನಿರ್ದೇಶಕರು ಹಾಗೂ ಆಡಳಿತ ಮಂಡಳಿಯ ಪ್ರಮುಖ ಸದಸ್ಯರು ಭಾರತೀಯರೇ ಆಗಿರಬೇಕು. ಇವರಲ್ಲೂ ಕನಿಷ್ಠ 50 ಪ್ರತಿಶತದಷ್ಟು ಜನರು ಸ್ವತಂತ್ರ ನಿರ್ದೇಶಕರಾಗಿ ರಬೇಕು.

ಎಲ್ಲ ಕಂಪೆ‌ನಿಗಳೂ ಇಷ್ಟು ಎಫ್ಡಿಐ ಪಡೆಯುವುದು ಕಡ್ಡಾಯವೇ?
ಇಲ್ಲ. ಇದು ಕಡ್ಡಾಯವಲ್ಲ. ಕಂಪೆ‌ನಿಗಳು ಬಯಸಿದರೆ ಮಾತ್ರ 74 ಪ್ರತಿಶತದವರೆಗೂ ವಿದೇಶಿ ನೇರ ಬಂಡವಾಳ ಹೂಡಿಕೆ ಪಡೆಯಬಹುದು.

ಇದರಿಂದ ಕಂಪೆನಿಗಳಿಗೇನು ಲಾಭ?
ಸದ್ಯಕ್ಕೆ ತಮ್ಮ ಪ್ರಮೋಟರ್‌ಗಳಿಂದ ಹೆಚ್ಚಿನ ಹೂಡಿಕೆ ಪಡೆಯಲು ಪರದಾಡುತ್ತಿರುವ ವಿಮಾ ಕಂಪನಿಗಳಿಗೆ ಈ ನಿಯಮದಿಂದಾಗಿ ಬಲ ಸಿಗಲಿದೆ. ಹೆಚ್ಚಿನ ಬಂಡವಾಳ ಹರಿಯುವಿಕೆ ಯಿಂದ ಕಂಪೆನಿಗಳು ಸದೃಢವಾಗಿ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳುತ್ತವೆ.

ಗ್ರಾಹಕರಿಗೇನು ಪ್ರಯೋಜನ?
ಎಫ್ಡಿಐ ಹೆಚ್ಚಿದರೆ, ಜಾಗತಿಕ ವಿಮಾ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡುವ, ತನ್ಮೂಲಕ ಉತ್ತಮ ಪಾಲಿಸಿಗಳನ್ನು ಪರಿಚಯಿಸುವ ಸಾಧ್ಯತೆ ಹೆಚ್ಚುತ್ತದೆ. ಕಂಪೆನಿಗಳ ನಡುವೆ ಪೈಪೋಟಿ ಹೆಚ್ಚುವುದರಿಂದ ವಿಮಾ ಪಾಲಿಸಿಯ ದರಗಳು ತಗ್ಗಬಹುದು. ಪಾಲಿಸಿಗಳ ವ್ಯಾಪ್ತಿಯೂ ಹೆಚ್ಚಾಗುವ ಸಾಧ್ಯತೆ ಬಹಳ ಇರುತ್ತದೆ. ಇನ್ನು ಕಂಪೆನಿಗಳು ಲಾಭದ ನಿರ್ದಿಷ್ಟ ಮೊತ್ತವನ್ನು ರಿಸರ್ವ್‌ ಫ‌ಂಡ್‌ ರೂಪದಲ್ಲಿ ಇಡಬೇಕು. ಇದರಿಂದಾಗಿ, ತುರ್ತುಪರಿಸ್ಥಿತಿ ಯ ಸಮಯದಲ್ಲಿ ಗ್ರಾಹಕರ ಹಿತಕ್ಕಾಗಿ ಬಳಸಲು ಸಾಧ್ಯವಾಗುತ್ತದೆ.

Advertisement

ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆಯೇ?
ಈಗ ದೇಶಾದ್ಯಂತ ಸಾರ್ವಜನಿಕ ಹಾಗೂ ಖಾಸಗಿ ವಿಮಾ ವಲಯದಲ್ಲಿ 40 ಲಕ್ಷದಷ್ಟು ಉದ್ಯೋಗಿಗಳಿದ್ದಾರೆ. ಹೆಚ್ಚಿನ ಪ್ರಮಾಣದ ಎಫ್ಡಿಐ ಹರಿದುಬರುವುದರಿಂದ ಈ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯನ್ನು ನಿರೀಕ್ಷಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next