ರಾಮನಗರ: ಕೆಪಿಎಸ್‌ಸಿ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದಎಫ್ಡಿಎ ಪರೀಕ್ಷೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜರುಗಿದೆ.
ಕಳೆದ ಒಂದು ತಿಂಗಳ ಹಿಂದೆ ರಾಜ್ಯದಲ್ಲಿ ಎಫ್ಡಿಎ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿದ್ದ ಕಾರಣ, ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದನ್ನೆ ಸವಾಲಾಗಿ ಸ್ವೀಕರಿಸಿದ್ದ ರಾಜ್ಯ ಸರ್ಕಾರ,ಅಚ್ಚುಕಟ್ಟಾಗಿ ಪರೀಕ್ಷೆ ಆಯೋಜನೆ ಮಾಡುವಲ್ಲಿ ಯಶಸ್ವಿಯಾಗಿದೆ.
ಮೊದಲ ಬಾರಿಗೆ ಮೆಟಲ್ ಡಿಟೆಕ್ಟರ್‌ಅನ್ನು ಬಳಕೆ ಮಾಡಿ ಪರೀಕ್ಷೆ ನಡೆಸ ಲಾಗಿದೆ. ಇನ್ನು ಜಿಲ್ಲೆಯಲ್ಲಿ ಯಾವುದೇಅಹಿತಕರ ಘಟನೆ ನಡೆಯದೆ ಮುಕ್ತಾಯ ಕಂಡಿದೆ.
ಭಾನುವಾರ ಬೆಳಗ್ಗೆ ಹಾಗೂ ಮಧ್ಯಾಹ್ನದ ಎರಡು ಅವಧಿಯಲ್ಲಿಜರುಗಿತು. ಮೊದಲ ಅವಧಿ ಸಾಮಾನ್ಯ ಜ್ಞಾನಕ್ಕೆ ಪರೀಕ್ಷೆ ನಡೆದರೇ, ಮಧ್ಯಾಹ್ನ ಸೆಷನ್‌ನಲ್ಲಿ ಕಡ್ಡಾಯ ಭಾಷಾ(ಕನ್ನಡ ಮತ್ತು ಆಂಗ್ಲ)ಗಳಿಗೆ ಪರೀಕ್ಷೆನಡೆದಿದೆ. ಎಫ್ಡಿಎ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ರಾಮನಗರದಲ್ಲಿ 12 ಹಾಗೂ ಚನ್ನಪಟ್ಟಣದಲ್ಲಿ 03 ಕೇಂದ್ರಗಳನ್ನು ತೆರೆಯಲಾಗಿತ್ತು. ಒಟ್ಟು 6,404 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು.ಮೊದಲ ಅವಧಿಯಲ್ಲಿ ಒಟ್ಟು 4,405 ಮಂದಿ ಹಾಜರಾದರೇ, 1999 ಮಂದಿ ಗೈರಾಗಿದ್ದಾರೆ. ಮಧ್ಯಾಹ್ನ ಭಾಷಾಪರೀಕ್ಷೆಗೆ 4,369 ಮಂದಿ ಹಾಜರಾಗಿದ್ದು, 2,035 ಮಂದಿ ಗೈರಾಗಿದ್ದಾರೆ.
ನೂತನಗಳು: ಈ ತನಕ ಪರೀಕ್ಷಾ ಪತ್ರಿಕೆ ಬಂಡಲ್‌ನಲ್ಲಿ ತೆಗೆದುಕೊಂಡು ಬರ ಲಾಗುತ್ತಿತ್ತು. ಆದರೆ, ಮೊದಲ ಬಾರಿಗೆ ಕಬ್ಬಿಣ ಪೆಟ್ಟಿಗೆಯಲ್ಲಿ ತರಲಾಗಿದೆ. ಎಲ್ಲ 15 ಪರೀಕ್ಷಾ ಕೇಂದ್ರದಲ್ಲಿಯು ಮೆಟಲ್ ಡಿಟೆಕ್ಟರ್ ಅನ್ನು ಅಳವಡಿಕೆ ಮಾಡಲಾ ಗಿತ್ತು. ಕಡ್ಡಾಯವಾಗಿ ಡಿಜಿಟಲ್ ಕೈ ಗಡಿಯಾರ ಸೇರಿದಂತೆ ಇತರ ಉಪಕರಣಗಳನ್ನು ತೆಗೆದುಕೊಂಡು ಹೋಗಲು ನಿಷೇಧ ಏರ್ಪಡಿಸಲಾಗಿತ್ತು. ಇನ್ನು ಯಾವುದೇ ಅಹಿತರಕ ಘಟನೆ ಜರುಗದಂತೆ ತಡೆಯುವ ಸಲುವಾಗಿ ಪ್ರತಿ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿತ್ತು.
ಅಭ್ಯರ್ಥಿಗಳ ಜಾತ್ರೆ: ಇನ್ನು ಜಿಲ್ಲೆಯ 15 ಪರೀಕ್ಷಾ ಕೇಂದ್ರಗಳ ಮುಂಭಾಗವು ಅಭ್ಯರ್ಥಿಗಳ ಜಾತ್ರೆಯೇ ಮೆರೆದಿತ್ತು.ಅದರಲ್ಲೂ ರಿಜಿಸ್ಟರ್ ನಂಬರ್‌ತಿಳಿದುಕೊಳ್ಳುವ ಸಲುವಾಗಿಅಭ್ಯರ್ಥಿಗಳು ಗುಂಪು ಕಟ್ಟಿ ನಿಂತಿದ್ದದೃಶ್ಯಗಳು ಎಲ್ಲೆಡೆ ಕಂಡು ಬಂದಿತು. ಈವೇಳೆ ಕೋವಿಡ್ ನಿಯಮಗಳನ್ನುಗಾಳಿಗೆ ತೂರಲಾಗಿತ್ತು. ಒಟ್ಟಾರೆಯಾಗಿಜಿಲ್ಲೆಯಲ್ಲಿ ಎಫ್ಡಿಎ ಪರೀಕ್ಷೆಯು ಭಾನುವಾರ ಸುಸೂತ್ರವಾಗಿ ಜರುಗಿದೆ.