Advertisement

FDA Exam Scam: ಇನ್ನೂ ಹಲವರು ವಶಕ್ಕೆ ಸಾಧ್ಯತೆ

12:06 AM Oct 31, 2023 | Team Udayavani |

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವಿವಿಧ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಬಂಧನವಾಗಿರುವ ಅಭ್ಯರ್ಥಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆಗಾಗಿ ಪೊಲೀಸ್‌ ತನಿಖೆ ನಡೆದ ಬಳಿಕ ಮತ್ತಷ್ಟು ಅಭ್ಯರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿಗೆ ಎಂದು ಮೂಲಗಳು ಖಚಿತಪಡಿಸಿದೆ.

Advertisement

ಈಗಾಗಲೇ ಜಿಲ್ಲೆಯಲ್ಲಿ ಮೂರು ಎಫ್ಐಆರ್‌ ದಾಖಲಾಗಿ, ಐವರು ಅಭ್ಯರ್ಥಿಗಳು ಸಹಿತ 12 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಶೋಧ ಕಾರ್ಯ ಮುಂದುವರಿದಿದ್ದು, ಬಂಧನಕ್ಕಾಗಿ ರಚಿಸಲಾದ ವಿಶೇಷ ತಂಡವು ಆರ್‌.ಡಿ. ಪಾಟೀಲ್‌ ಇರುವ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಪ್ರಮುಖವಾಗಿ ಮುಂಬಯಿಯಲ್ಲಿರುವ ಬಗ್ಗೆ ಒಂದು ಮೂಲಗಳು ತಿಳಿಸಿದರೆ, ಮತ್ತೂಂದು ಮೂಲಗಳು ನೆರೆಯ ಹೈದರಾಬಾದ್‌ನಲ್ಲಿ ಇದ್ದಾನೆ ಎನ್ನಲಾಗುತ್ತಿದೆ. ಹೀಗಾಗಿ ಎರಡೂ¾ರು ದಿನದೊಳಗೆ ಈ ಸ್ಥಳಗಳಿಗೆ ತಂಡ ತೆರಳಲಿವೆ ಎನ್ನಲಾಗಿದೆ.

ಮತ್ತೆ 7 ಮಂದಿಗೆ ನ್ಯಾಯಾಂಗ ಬಂಧನ
ಯಾದಗಿರಿ: ಕೆಇಎ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ ಯಾಗಿದೆ. ರವಿವಾರ 9 ಮಂದಿ ಆರೋಪಿಗಳನ್ನು ಬಂ ಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಪೊಲೀಸರು, ಸೋಮವಾರ ಮತ್ತೆ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next