Advertisement
ಓದಿ : ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದೀರಾ.? ಭಾರತೀಯ ರೈಲ್ವೆಯ ಕೋವಿಡ್ ಗೈಡ್ಲೈನ್ಸ್ ಗಮನಿಸಿ
Related Articles
Advertisement
ತನ್ನ ಲಕ್ಷಾಂತರ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ಎಸ್ ಬಿ ಐ ರವಾನಿಸಿದೆ. ಸೈಬರ್ ಅಪರಾಧಿಗಳು ಇದೀಗ ಗ್ರಾಹಕರ ಖಾತೆಗಳಲ್ಲಿ ಫಿಕ್ಸ್ಡ್ ಡೆಪಾಸಿಟ್ ಗಳನ್ನು ತೆರೆದಿರುವ ವಿಚಾರವನ್ನು ಎಸ್ ಬಿ ಐ ಬಯಲು ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಬ್ಯಾಂಕಿಂಗ್ ವಿವರಗಳನ್ನು ಯಾರೊಂದಿಗೂ ಯಾವುದೇ ಕಾರಣಕ್ಕೂ ಹಂಚಿಕೊಳ್ಳದಂತೆ ಬ್ಯಾಂಕ್ ತನ್ನ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.
ಪಾಸ್ ವರ್ಡ್, ಒಟಿಪಿ , ಕಾರ್ಡ್ ಸಂಖ್ಯೆ ಮುಂತಾದ ವಿವರಗಳನ್ನು ಕೇಳಿಕೊಂಡು ಬರುವ ಕರೆಗಳ ಬಗ್ಗೆ ಎಚ್ಚರದಿಂದ ಇರುವಂತೆ ಎಸ್ ಬಿ ಐ ಎಚ್ಚರಿಕೆ ನೀಡಿದೆ.
ಎಸ್ ಬಿ ಐ ತನ್ನ ಗ್ರಾಹಕರಿಂದ ಈ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎನ್ನುವುದನ್ನು ಕೂಡಾ ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ಹೊಸ ರೀತಿಯ ವಂಚನೆಯ ಮಾಹಿತಿಯನ್ನು ಎಸ್ ಬಿ ಐ ತನ್ನ ಗ್ರಾಹಕರಿಗೆ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ನೀಡಿದೆ.
ಓದಿ : ಫ್ಲಿಪ್ ಕಾರ್ಟ್ ಹಾಗೂ ಅದಾನಿ ಗ್ರೂಪ್ ಒಪ್ಪಂದ : ಉಭಯ ಸಂಸ್ಥೆಗಳ ಮುಂದಿನ ಯೋಜನೆ ಏನು..?