Advertisement

ಎಫ್ ಸಿಆರ್‌ಎ ಕಾಯ್ದೆಗೆ ಮತ್ತೆ 7 ತಿದ್ದುಪಡಿ: ನಿಯಮ ಬಿಗಿಗೊಳಿಸಲು ಕೇಂದ್ರ ಕ್ರಮ

08:46 PM Jul 02, 2022 | Team Udayavani |

ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್‌ಎ) ನಿಯಮಗಳು, 2011 ಅನ್ನು ಮತ್ತಷ್ಟು ಬಿಗಿಗೊಳಿಸಿರುವ ಕೇಂದ್ರ ಸರ್ಕಾರ, ನಿಯಮಗಳಲ್ಲಿರುವ 7 ಅಂಶಗಳಿಗೆ ತಿದ್ದುಪಡಿ ತಂದಿದೆ.

Advertisement

ವಿಶೇಷವೆಂದರೆ, ಈ ಹೊಸ ನಿಯಮಗಳು (ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ನಿಯಮಗಳು, 2022) ಜುಲೈ 1ರಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದ್ದು, ಕೇಂದ್ರ ಗೃಹ ಇಲಾಖೆಯು ಶುಕ್ರವಾರವೇ ಈ ಕುರಿತ ಅಧಿಕೃತ ಗೆಜೆಟ್‌ ಪ್ರಕಟಣೆಯನ್ನು ಹೊರಡಿಸಿದೆ.

ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳಿಗೆ ವಿದೇಶಿ ದೇಣಿಗೆಯ ಸ್ವೀಕಾರ ಮತ್ತು ಬಳಕೆಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನಿಯಮ 6ರಲ್ಲಿ “ಒಂದು ಲಕ್ಷ ರೂಪಾಯಿ’ ಎಂದಿರುವುದನ್ನು “ಹತ್ತು ಲಕ್ಷ ರೂಪಾಯಿ’ ಎಂದೂ, “30 ದಿನಗಳು’ ಎಂದಿರುವುದನ್ನು “3 ತಿಂಗಳು’ ಎಂದು ಬದಲಾಯಿಸಲಾಗಿದೆ. ಈ ರೀತಿಯಾಗಿ ಒಟ್ಟು 7 ಅಂಶಗಳಲ್ಲಿ ತಿದ್ದುಪಡಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next