Advertisement

ಭಾರತೀಯ ರೆಸ್ಟೋರೆಂಟ್‌ ಮೇಲೆ ದಾಳಿ ಕೇಸ್‌ ಎಫ್ ಬಿಐಗೆ

11:11 PM Oct 19, 2021 | Team Udayavani |

ವಾಷಿಂಗ್ಟನ್‌: ಕಳೆದ ವರ್ಷ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿನ ಸಾಂಟ ಫೆ ನಗರದಲ್ಲಿರುವ ಭಾರತೀಯರ ರೆಸ್ಟೋರೆಂಟ್‌ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದ ಪ್ರಕರಣದ ತನಿಖೆಯನ್ನು ಇದೀಗ ಅಮೆರಿಕ ತನಿಖಾ ಸಂಸ್ಥೆಯಾಗಿರುವ ಎಫ್ ಬಿಐ ಕೈಗೆತ್ತಿಕೊಂಡಿದೆ.

Advertisement

ಭಾರತ ಮೂಲದ ಬಾಲ್ಜೋತ್‌ ಸಿಂಗ್‌ ಮಾಲೀಕತ್ವದ ಇಂಡಿಯಾ ಪ್ಯಾಲೆಸ್‌ ರೆಸ್ಟೋರೆಂಟ್‌ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸಲಿದ್ದೇವೆ. ರಾಷ್ಟ್ರೀಯ ಗಮನ ಸೆಳೆದಿದ್ದ ಈ ಪ್ರಕರಣವನ್ನು ಬೇಧಿಸಿ, ನ್ಯಾಯ ಒದಗಿಸಲಿದ್ದೇವೆ ಎಂದು ಎಫ್ ಬಿಐ ತಿಳಿಸಿದೆ.

2020ರ ಜೂನ್‌ನಲ್ಲಿ ಇಂಡಿಯಾ ಪ್ಯಾಲೆಸ್‌ ರೆಸ್ಟೋರೆಂಟ್‌ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳು, ಅನೇಕ ವಸ್ತುವನ್ನು ಹಾಳುಗೆಡವಿ, ಗೋಡೆಯ ಮೇಲೆ “ಟ್ರಂಪ್‌ 2020′ ಎಂದು ಬರೆದಿದ್ದರು. ದಾಳಿಯಿಂದಾಗಿ ರೆಸ್ಟೋರೆಂಟ್‌ಗೆ 1,00,000 ಡಾಲರ್‌ ನಷ್ಟವಾಗಿದ್ದಾಗಿ ವರದಿಯಾಗಿತ್ತು.

ಇದನ್ನೂ ಓದಿ:ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

Advertisement

Udayavani is now on Telegram. Click here to join our channel and stay updated with the latest news.

Next