Advertisement

ಎಫ್ ಬಿ ಫೋಟೋ: ಶರ್ಮಾಗೆ ನೋಟಿಸ್‌

01:05 AM Mar 14, 2019 | Team Udayavani |

ಹೊಸದಿಲ್ಲಿ:  ಫೇಸ್‌ಬುಕ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರ ಫೋಟೋಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ, ದಿಲ್ಲಿಯ ಬಿಜೆಪಿ ಶಾಸಕ ಓಂ ಪ್ರಕಾಶ್‌ ಶರ್ಮಾಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್‌ ಜಾರಿಗೊಳಿಸಿದೆ. 

Advertisement

ಜನಪ್ರತಿನಿಧಿಯೊಬ್ಬರ ಫೇಸ್‌ಬುಕ್‌ ಖಾತೆಯಲ್ಲಿ ಚುನಾವಣ ನೀತಿ ಸಂಹಿತೆ ಉಲ್ಲಂ ಸಿದೆ ಎಂಬ ಆರೋಪದಡಿ ಚುನಾವಣ ಆಯೋಗ ಹೀಗೆ ನೋಟಿಸ್‌ ಜಾರಿಗೊಳಿಸಿರುವುದು ಇದೇ ಮೊದಲು. ನೋಟಿಸ್‌ ನೀಡಿಕೆಗೆ ಪ್ರತಿಕ್ರಿಯೆ ನೀಡಿದ ಶರ್ಮಾ, ರಾಷ್ಟ್ರೀಯ ನಾಯಕರ ವಿರುದ್ಧ ಚುನಾವಣ ಆಯೋಗ ದ್ವಂದ್ವ ನೀತಿ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next