Advertisement

10 ವರ್ಷ ಬಳಿಕ ಟೆಸ್ಟ್‌ ಆಡಿದ ಆಲಂ

09:49 PM Aug 13, 2020 | mahesh |

ಸೌತಾಂಪ್ಟನ್‌: ಇಂಗ್ಲೆಂಡ್‌ ವಿರುದ್ಧ ಮೊದಲ್ಗೊಂಡ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನದ ಆಡುವ ಬಳಗಲ್ಲೊಂದು ಅಚ್ಚರಿ ಕಂಡುಬಂದಿತ್ತು. ಇದರಲ್ಲಿ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌ ಫ‌ವಾದ್‌ ಆಲಂ ಹೆಸರು ಕಾಣಿಸಿ ಕೊಂಡಿತ್ತು. ಇದರೊಂದಿಗೆ ಅವರು ಬರೋಬ್ಬರಿ 10 ವರ್ಷ, 259 ದಿನಗಳ ಬಳಿಕ ಟೆಸ್ಟ್‌ ಆಡುವ ಅವಕಾಶ ಪಡೆದು ಸುದ್ದಿಯಾದರು!

Advertisement

ಫ‌ವಾದ್‌ ಆಲಂ 2009ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ನ್ಯೂಜಿಲ್ಯಾಂಡ್‌ ವಿರುದ್ಧದ ಡ್ಯುನೆಡಿನ್‌ ಟೆಸ್ಟ್‌ ಬಳಿಕ ತಂಡದಿಂದ ಬೇರ್ಪಟ್ಟರು. ಹೆಚ್ಚು ಕಡಿಮೆ 11 ವರ್ಷಗಳ ಬಳಿಕ ಅವರು ಮರಳಿ ಟೆಸ್ಟ್‌ ತಂಡವನ್ನು ಕೂಡಿಕೊಂಡಿದ್ದಾರೆ.
ಅಂದು ಕೇವಲ 3 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಆಲಂ, ಒಂದು ಶತಕ ಸಹಿತ 250 ರನ್‌ ಪೇರಿಸಿದ್ದರು. ಪದಾರ್ಪಣ ಪಂದ್ಯದಲ್ಲೇ 168 ರನ್‌ ಬಾರಿಸಿ ಮಿಂಚಿದ್ದರು. ಆದರೆ ತಂಡದ ಖಾಯಂ ಸದಸ್ಯನಾಗಲು ಅವರಿಗೆ ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಅವರು 88 ಟೆಸ್ಟ್‌ ಪಂದ್ಯಗಳಿಂದ ದೂರ ಉಳಿದಿದ್ದರು.

ಇದು ಪಾಕ್‌ ಕ್ರಿಕೆಟಿಗನೋರ್ವ ತಂಡಕ್ಕೆ ಮರಳಿದ ಸುದೀರ್ಘ‌ ಅವಧಿಯ 2ನೇ ನಿದರ್ಶನ. ಇದಕ್ಕೂ ಮೊದಲು ಯೂನಿಸ್‌ ಅಹ್ಮದ್‌ 17 ವರ್ಷ, 111 ದಿನಗಳ ಬಳಿಕ ಟೆಸ್ಟ್‌ ಆಡಿದ್ದು ದಾಖಲೆಯಾಗಿದೆ.

ಪಂದ್ಯಕ್ಕೆ ಮಳೆ ಅಡ್ಡಿ
ಸೌತಾಂಪ್ಟನ್‌ ಟೆಸ್ಟ್‌ ಪಂದ್ಯಕ್ಕೆ ಮೊದಲ ದಿನವೇ ಮಳೆಯಿಂದ ಅಡ್ಡಿಯಾಗಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ಥಾನ, ಪಂದ್ಯ ಸ್ಥಗಿತಗೊಂಡಾಗ 2 ವಿಕೆಟಿಗೆ 85 ರನ್‌ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next