Advertisement
ಅದನ್ನೇ ಸಂಗೀತ ನಿರ್ದೇಶಕ ನಾಗೇಂದ್ರ ಅವರಿಗೂ ಹೇಳಿದೆ. ಅವರು ಇಲ್ಲ ಇಲ್ಲ. ಇದನ್ನು ಹಾಡುವುದಕ್ಕೆ ಕಷ್ಟ ಆಗ್ತದೆ. ಚೆನ್ನಾಗಿ ರಿಹರ್ಸಲ್ ಮಾಡು ಅಂದರು. ರಿಹರ್ಸ ಲ್‌ಗೆ ನಿಂತಾಗಲೇ ಅದನ್ನು ಹಾಡುವುದು ಎಷ್ಟು ಕಷ್ಟ ಅಂತ ಅರ್ಥ ಆಯ್ತು ಎಂದಿದ್ದರು ಬಾಲು.
ಎಸ್‌ಪಿಬಿ ಅವರ ಹೆಸರಲ್ಲಿರುವ ಮತ್ತೂಂದು ದಾಖಲೆ ಎಂದರೆ ಅದು 40 ಸಾವಿರ ಹಾಡುಗಳಿಗೆ ಧ್ವನಿಯಾಗಿರುವುದು. ತಮ್ಮ 50 ವರ್ಷದ ಸಂಗೀತ ಜೀವನದಲ್ಲಿ ಎಸ್‌ಪಿಬಿ ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇದನ್ನೂ ಓದಿ: ‘ಸಂಗೀತ ಸಂಜೆ’ಯ ಮೂಲಕ ಶಾಲಾ ಕಟ್ಟಡಕ್ಕೆ 1.20 ಲಕ್ಷ ರೂ.ದೇಣಿಗೆ ನೀಡಿದ್ದರು ಎಸ್ ಪಿಬಿ !
Related Articles
Advertisement
ಅದೆಷ್ಟೋ ಗಾಯಕರು, 10-20 ಹಾಡುಗಳನ್ನು ಹಾಡುವ ಹೊತ್ತಿಗೆ ತಾವು ಬೆಳೆದುಬಿಟ್ಟೆವು ಎಂಬ ಭಾವನೆಯಲ್ಲಿರುತ್ತಾರೆ. ಸಂಗೀತಭ್ಯಾಸ ಬಿಡುತ್ತಾರೆ. ಆದರೆ, ಎಸ್‌ಪಿಬಿ 40 ಸಾವಿರ ಹಾಡುಗಳನ್ನು ಹಾಡಿದ್ದರೂ ಅವರಲ್ಲಿ ಆ ಹಮ್ಮು-ಬಿಮ್ಮು ಇರಲಿಲ್ಲ. ಯಾವುದೇ ಕಾರ್ಯಕ್ರಮ ನೀಡುವ ಮುನ್ನ ಏಕಾಂತದಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದರು.
ಖ್ಯಾತಿ ತಂದ ಶಂಕರಾಭರಣಂಎಸ್ಪಿಬಿ ಅವರು ಬೇರೆ ಬೇರೆ ಭಾಷೆಯ ಹಲವು ಸಿನೆಮಾಗಳಿಗೆ ಹಾಡಿದ್ದರೂ ಅವರಿಗೆ ರಾಷ್ಟ್ರಮಟ್ಟದ ಮನ್ನ‚ಣೆ, ಖ್ಯಾತಿಯನ್ನು ತಂದುಕೊಟ್ಟಿದ್ದ ತೆಲುಗು ಚಿತ್ರ
ಶಂಕರಾಭರಣಂ. 1980ರಲ್ಲಿ ತೆರೆಕಂಡ ಈ ಚಿತ್ರವನ್ನು ಕೆ.ವಿಶ್ವನಾಥನ್ ನಿರ್ದೇಶಿಸಿದ್ದಾರೆ. ಕೆ.ವಿ. ಮಹಾದೇವನ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಕರ್ನಾಟಕ ಸಂಗೀತದ ಬಳಕೆಯನ್ನು ಮಾಡಿದರು. ಈ ಚಿತ್ರ ಎಸ್‌ಪಿಬಿ ಅವರಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರಿಯ ಮನ್ನಣೆಯನ್ನು ತಂದುಕೊಟ್ಟಿತು. ಉತ್ತಮ ಹಿನ್ನೆಲೆ ಗಾಯಕ ರಾಷ್ಟ್ರಪ್ರಶಸ್ತಿ ಕೂಡಾ ಈ ಚಿತ್ರಕ್ಕಾಗಿ ಎಸ್‌ಪಿಬಿ ಅವರಿಗೆ ಲಭಿಸಿತು. ಇದನ್ನೂ ಓದಿ: ‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB ಅವರ ಧ್ವನಿ’: ಹಿರಿಯ ನಟ ಅನಂತ್ ಕಂಬನಿ ಚಿನ್ನ, ಪ್ಲಾಟಿನಂಗಿಂತಲೂ ನೀರು
ಅಮೂಲ್ಯ,ಅದನ್ನು ಉಳಿಸಿ ದೇಶದಲ್ಲಿ ಹಲವೆಡೆ ಸರಿಯಾದ ಮಳೆಯಿಲ್ಲದೆ ಜನರು ಬರದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಚಿನ್ನ, ಪ್ಲಾಟಿನಂಗಳಿಗಿಂತ ನೀರು ಅಮೂಲ್ಯವಾದದ್ದು, ಅದನ್ನು ಮಿತವಾಗಿ ಬಳಸಿ, ಉಳಿಸಿ ಎಂದು ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅನೇಕ ಕಡೆಗಳಲ್ಲಿ ಮನವಿ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಎಸ್‌ಪಿಬಿ ತಾವು ಭಾಗವಹಿಸುತ್ತಿದ್ದ ಆಡಿಯೋ ರಿಲೀಸ್ ಕಾರ್ಯಕ್ರಮ, ಸ್ಟೇಜ್ ಶೋ ಹೀಗೆ ಅನೇಕ ಕಡೆಗಳಲ್ಲಿ ನೀರಿನ ಮಹತ್ವದ ಬಗ್ಗೆ ಹಾಗೂ ನೀರನ್ನು ಮಿತವಾಗಿ ಬಳಸಬೇಕೆಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು.