Advertisement

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಗೇಮ್ FAU-G ಲಭ್ಯ

02:38 PM Jan 26, 2021 | Team Udayavani |

ನವ ದೆಹಲಿ : FAU-G ಅಥವಾ ಫಿಯರ್‌ ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್, ಈಗ Google Play ನಲ್ಲಿ ಡೌನ್‌ ಲೋಡ್ ಮಾಡಲು ಲಭ್ಯವಿದೆ. ಈ ಆಟವನ್ನು ಬೆಂಗಳೂರು ಮೂಲದ ಎನ್‌ ಕೋರ್ ಗೇಮ್ಸ್  ಅಭಿವೃದ್ಧಿಪಡಿಸಿದೆ ಮತ್ತು ಕೇಂದ್ರ ಸರ್ಕಾರದಿಂದ ನಿಷೇಧಕ್ಕೊಳಗಾದ ಜನಪ್ರಿಯ PUBG ಗೇಮ್ ಗೆ ಭಾರತದ ಪರ್ಯಾಯವಾಗಿದೆ ಎಂದು ಹೇಳಲಾಗುತ್ತದೆ.

Advertisement

ಓದಿ : ಬ್ಯಾರಿಕೇಡ್ ಮುರಿದವರು ನಾವಲ್ಲ : ಸಂಯುಕ್ತ ಕಿಸಾನ್ ಮೋರ್ಚಾ

ಎನ್ ಕೋರ್ ಈ ಹೊಸ ಆಟವನ್ನು ಸೆಪ್ಟೆಂಬರ್‌ ನಲ್ಲಿ ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿತ್ತು. ಪ್ರಾಥಮಿಕ ಆವೃತ್ತಿಯನ್ನು ನವೆಂಬರ್‌ ನಲ್ಲಿ ಬಿಡುಗಡೆ ಮಾಡಲು ಆಯೋಜಿಸಲಾಗಿತ್ತು. ಆದಾಗ್ಯೂ, ಅದು ವಿಳಂಬವಾಗಿತ್ತು.

ಗಣರಾಜ್ಯೋತ್ಸವದ ಸಂದರ್ಭದಲ್ಲಿ  FAU-G, ಗೂಗಲ್ ಪ್ಲೇ ಸ್ಟೋರ್ ನಲ್ಲಿ  ಡೌನ್‌ ಲೋಡ್ ಮಾಡಲು ಲಭ್ಯವಿದೆ. ಆಟದ ಪ್ರಿ ರಿಜಿಸ್ಟ್ರೇಶನ್ ಕಳೆದ ಡಿಸೆಂಬರ್ ನಿಂದ ಲೈವ್ ಆಗಿತ್ತು.  ಕೆಲವೇ ದಿನಗಳ ಹಿಂದೆ ನಾಲ್ಕು ಮಿಲಿಯನ್‌ಗಳನ್ನು ಮೀರಿದೆ. ಹಾಗೂ FAU-G ನ ಬ್ಯಾಟಲ್ ರಾಯಲ್ ಮೋಡ್ ಮತ್ತು ಪಿವಿಪಿ [ಪ್ಲೇಯರ್ ವರ್ಸಸ್ ಪ್ಲೇಯರ್] ಮೋಡ್‌ಗಳು ‘ಶೀಘ್ರದಲ್ಲೇ ಬರಲಿದೆ’ ಎಂದು ಎನ್ ಕೋರ್ ಗೇಮ್ಸ್ ಸಂಸ್ಥಾಪಕ ವಿಶಾಲ್ ಗೊಂಡಾಲ್ ಖಚಿತಪಡಿಸಿದ್ದಾರೆ.

ಓದಿ : ಗಣರಾಜ್ಯೋತ್ಸವದಲ್ಲಿ ಜಮ್ ನಗರದ “ಪಾಗ್ಡಿ”ಯಲ್ಲಿ ಕಂಗೊಳಿಸಿದ ಪ್ರಧಾನಿ

Advertisement

FAU-G ಅಥವಾ ಫಿಯರ್‌ ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್, ಆಟವು ಈಗ ಗೂಗಲ್ ಪ್ಲೇನಲ್ಲಿ ಉಚಿತ ಡೌನ್‌ಲೋಡ್ ಗಾಗಿ ಲಭ್ಯವಿದೆ. ಬಳಕೆದಾರರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಗಳಲ್ಲಿನ ಗೂಗಲ್ ಪ್ಲೇ ಸ್ಟೋರ್‌ ಗೆ ಹೋಗಿ ‘ಇನ್‌ಸ್ಟಾಲ್’ ಬಟನ್ ಕ್ಲಿಕ್ ಮಾಡುವ ಮೂಲಕ FAU-G ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಡೆವಲಪರ್‌ಗಳ ಪ್ರಕಾರ, ಆಟವು ಆಂಡ್ರಾಯ್ಡ್ 8 ವರ್ಶನ್ ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಹ್ಯಾಂಡ್‌ ಸೆಟ್‌ ಗಳಲ್ಲಿ ಈ ಗೇಮ್ ನನ್ನು ಆಡಲು ಬಳಸಬಹುದು ಎಂದು ಕಂಪೆನಿ ಹೇಳಿದೆ.

ಸದ್ಯಕ್ಕೆ, ಐಒಎಸ್ ಬಳಕೆದಾರರಿಗೆ ಈ ಆಟ ಲಭ್ಯವಾಗುತ್ತದೆಯೇ ಅಥವಾ ಯಾವಾಗ ಎಂಬ ಬಗ್ಗೆ ಡೆವಲಪರ್ಸ್ ಯಾವುದೇ ಮಾಹಿತಿ ಇದುವರೆಗೆ ನೀಡಿಲ್ಲ.

ಕಳೆದ ಸೆಪ್ಟೆಂಬರ್‌ ನಲ್ಲಿ ನಟ ಅಕ್ಷಯ್ ಕುಮಾರ್  FAU-G ಬಗ್ಗೆ ಮಾಹಿತಿ ನೀಡಿದ್ದರು, ಪ್ರಧಾನಿ ಮೋದಿ ಅವರ ಆತ್ಮನಿರ್ಭರ್ ಆಂದೋಲನವನ್ನು ಈ ಯೋಜನೆ ಬೆಂಬಲಿಸುತ್ತದೆ. ಮಾತ್ರವಲ್ಲದೇ, ಈ ಆಟವು ಆಟಗಾರರಿಗೆ ‘ನಮ್ಮ ಸೈನಿಕರ ತ್ಯಾಗದ ಬಗ್ಗೆ ತಿಳಿಯಲು’ ಸಹಾಯ ಮಾಡುತ್ತದೆ ಎಂದು ಹೇಳಿದ್ದರು. FAU-G ಆಟದಿಂದ ಬರುವ ಆದಾಯದ 20 ಪ್ರತಿಶತವನ್ನು “ಭಾರತ್ ಕೆ ವೀರ್ ಟ್ರಸ್ಟ್‌”ಗೆ ನೀಡಲಾಗುವುದು ಎಂದು ಕುಮಾರ್ ಘೋಷಿಸಿದ್ದರು.

ಓದಿ : ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next