Advertisement

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

07:46 PM Jun 21, 2020 | Hari Prasad |

ಅಪ್ಪಂದಿರ ದಿನದ ಶುಭಾಶಯಗಳು.

Advertisement

ಅಪ್ಪ ಅಂದ್ರೆ?? – ಈ ಕಾಡೋ ಪ್ರಶ್ನೆಗೆ,

‘ಒಂದು ಕ್ಷಣ ಕಣ್ಮುಂದೆ ಬರುವ ಬರೀಯ ವ್ಯಕ್ತಿಯಲ್ಲ, ಪ್ರತಿ ಕ್ಷಣವೂ ಅನಾವರಣಗೊಳ್ಳುವ ವ್ಯಕ್ತಿತ್ವ” ಅನ್ನೋ ಉತ್ತರಾನೆ ನೀನಲ್ವ.

ಅಪ್ಪ ಅನ್ನೋ ಆಕಾಶದಲ್ಲಿ, ಕಳೆಯೋದು ಪ್ರತಿ ಕ್ಷಣವೂ ಎಣಿಕೆಯಿಲ್ಲದ ನಕ್ಷತ್ರಗಳಂತೆ!!

ನೀ ತಂದಿದ್ದ ಮೊದಲ ಉಡುಗೊರೆ ‘ಪುಟ್ಟ ಫ್ರಾಕ್”, ಈಗಲೂ ಬಟ್ಟೆಗಳ ಅಲೆಮಾರದಲ್ಲಿ ಮಾಸದೆ ಬೆಚ್ಚಗೆ ಕುಳಿತಿದೆ.ಅದನ್ನು ಕಂಡಾಗಲೆಲ್ಲ ಕೈ ಸವರುವ ಭಾವ.

Advertisement

ಪ್ರತಿ ಅಪ್ಪಂಗೂ ಮಗುವಾದಾಗ, ಆ ಮಗುವು ಮಗಳಾದಾಗ ಅದೇನೋ ಹೆಮ್ಮೆ. ನಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾದಾಗ, ಎಸ್.ಎಸ್.ಎಲ್.ಸಿ ರಿಸಲ್ಟ್ ಬಂದಾಗ, ಪ್ರಬುದ್ಧ ಹೆಜ್ಜೆ ಇಟ್ಟಾಗ ನಿಂಗೆ ಖಂಡಿತ ಹೆಮ್ಮೆ ಆಗಿರುತ್ತೆ ಅಲ್ವಾ ಅಪ್ಪ??

ನಾನೊಮ್ಮೆ ಛದ್ಮ ವೇಷದಲ್ಲಿ ಕಿತ್ತೂರು ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ ಪಾತ್ರ ಮಾಡಿದ್ದೆ. ನನ್ನಲ್ಲಿ ಆತ್ಮಬಲ ಕುಗ್ಗಿದಾಗ, ಮುಂದಿನ ನಡೆ ಅಸ್ಪಷ್ಟವಾದಾಗ, “ರಾಣಿ ಲಕ್ಷ್ಮೀಬಾಯಿ, ಚೆನ್ನಮ್ಮ ಆಗಿದ್ದೋಳು ನೀನು ಹೀಗೆಲ್ಲಾ ಹೆದರುತ್ತಾರಾ ಧೈರ್ಯದಿ ಹೆಜ್ಜೆಯಿಡು.” ಅಂತ ಧೈರ್ಯ ತುಂಬ್ತಾರೆ.

ಅಪ್ಪ ಅಂದ್ರೆ ಹಾಗೆ ಅಲ್ವಾ…?

ನಡೆವ ಹಾದಿಯಲಿ ನೆರಳಿನಂತೆ, ದಡ ಸೇರುವ ದೋಣಿಗೆ ಹುಟ್ಟಂತೆ!! ಅದೆಷ್ಟೇ ಹೇಳಿದರು ಇನ್ನೂ ಏನೋ ಉಳಿದುಬಿಡುವ ಭಾವ. ಈ ಅಪ್ಪನ ಹೆಗಲು ಎಂದಿಗೂ ಸ್ವರ್ಗಕ್ಕೂ ಮಿಗಿಲು…

ಇಂತಿ,

ನಿಮ್ಮ ಪುತ್ರಿ.

– ಪದ್ಮಶ್ರೀ. ಎ (ಇಂಜಿನಿಯರಿಂಗ್ ವಿದ್ಯಾರ್ಥಿನಿ)   ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next