Advertisement

ಇಂದಿರಾ ಐವಿಎಫ್‌ನಲ್ಲಿ “ತಂದೆಯಂದಿರ ದಿವಸ’ಆಚರಣೆ

05:21 AM Jun 23, 2020 | Lakshmi GovindaRaj |

ಬೆಂಗಳೂರು: ತಂದೆ ಎಂಬುದು ಸಂತಾನಕ್ಕೆ ಪೂರಕ ಹಾಗೂ ಸಂವೇದನಾಶೀಲಕಾರಿ ಆಗಿರುವ ಒಂದು ವ್ಯಕ್ತಿತ್ವ. ತಾಯಿ 9 ತಿಂಗಳು ತನ್ನ ಗರ್ಭದಲ್ಲಿ ಹುಟ್ಟುವ ಕೂಸಿನ ಪಾಲನೆಯನ್ನು ಮಾಡುವ ಸಮಯದಲ್ಲಿ ತಂದೆ ಎನಿಸಿಕೊಳ್ಳುವ, ಹುಟ್ಟುವ ಮಗುವಿನ ಭವಿಷ್ಯದ ಬಗ್ಗೆ ಯೋಚಿಸುತ್ತಿರುತ್ತಾನೆ ಎಂದು ಇಂದಿರಾ ಐವಿಎಫ್ ಆಸ್ಪತ್ರೆ ಮುಖ್ಯಸ್ಥ ಮತ್ತು ಫ‌ರ್ಟಿಲಿಟಿ ತಜ್ಞ ಡಾ. ಶ್ಯಾಮ್‌ ನಂದನ್‌ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಜೆ.ಪಿ.ನಗರದ ಇಂದಿರಾ ಐವಿಎಫ್  ಆಸ್ಪತ್ರೆ ಯಲ್ಲಿ ಆಯೋಜಿಸಿದ್ದ “ತಂದೆಯಂದಿರ ದಿವಸ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಸ್ತವವಾಗಿಸಂತಾನಹೀನತೆಗೆಪುರುಷರಲ್ಲಿಯೂ ಸಹ ಹಲವು ನ್ಯೂನತೆಗಳಿರುತ್ತವೆ. ಪ್ರತಿಯೊಬ್ಬ ಪುರುಷನು ತಾನು  ತಂದೆಯಾಗಬೇಕು. ಮಕ್ಕಳಿಂದ ತಂದೆಯಂದಿರ ದಿವಸದಂದು ಶುಭಾಶಯ, ಪ್ರಶಂಸೆ ಪಡೆಯಬೇಕು ಎಂದು ಇಚ್ಛಿಸುತ್ತಾನೆ.

ಕೆಲವು ಪುರುಷರಿಗೆ ಆ ಭಾಗ್ಯವಿರುವುದಿಲ್ಲ. ನನಗೆ ಯಾವುದೇ ಚಟವಾಗಲಿ ಅಥವಾ ಅಭ್ಯಾಸವಾಗಲಿ ಇಲ್ಲ. ನಾನು  ಆರೋಗ್ಯವಾಗಿ ದ್ದೇನೆ. ನನಗೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲವೆಂಬ ತಪ್ಪು ಕಲ್ಪನೆ ಇರುತ್ತದೆ. ಆದರೆ, ಅವರು ಸಹ ಸಂಕೋಚಬಿಟ್ಟು ಎಲ್ಲ ತರಹದ ಚಿಕಿತ್ಸೆಗೆ ಒಳಪಟ್ಟರೆ ಇಂದಿನ ಆಧುನಿಕ ತಂತ್ರಜ್ಞಾನದಿಂದ ತಂದೆಯಾಗುವ  ಕನಸನ್ನು ನನಸಾಗಿಸಿಕೊಳ್ಳಬಹುದು ಎಂದು ಡಾ. ಶ್ಯಾಮ್‌ ತಿಳಿಸಿದರು.

ರಾಜಾಜಿನಗರ ಇಂದಿರಾ ಎವಿಎಫ್ ಆಸ್ಪತ್ರೆಯ ನುರಿತ ತಜ್ಞೆ ಡಾ. ಮಮತಾ ಅವರು, ಪುರುಷರಲ್ಲಿ ಕಡಿಮೆ ವೀರ್ಯಾಣು, ಶೂನ್ಯ ವೀರ್ಯಾಣು ಮುಂತಾದ ಸಮಸ್ಯೆ  ಇರುತ್ತದೆ. ಅಂತಹವರಿಗೆ ಐವಿಎಫ್, ಇಕ್ಸಿ ಚಿಕಿತ್ಸೆ ವರದಾನವಾಗಿದೆ ಎಂದರು. ಇಂದಿರಾನಗರದ ಫ‌ಲವತ್ತತೆಯ ನುರಿತ ತಜ್ಞೆ ಡಾ. ಸಂಧ್ಯಾ ಘೋಡೆ ಮತ್ತಷ್ಟು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next