Advertisement
ಹರ್ಷಿತ್ ಕೊಲೆ ಆರೋಪಿ. ಸುಳ್ಯ ತಾಲೂಕಿನ ಅಮರಮುಟ್ನೂರು ಗ್ರಾಮದ ಕುಕ್ಕುಜಡ್ಕದ ದಿ| ಗುರುವ ಅವರ ಪುತ್ರ ಕಿಟ್ಟು (54) ಮೃತ ವ್ಯಕ್ತಿ. ಮೇ 11ರಂದು ಕಿಟ್ಟು ಅವರ ಮನೆಗೆ ಅವರ ಮೊದಲ ಪತ್ನಿಯ ಮಗ ಹರ್ಷಿತ್ ಬಂದು ಕಿಟ್ಟು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡುವ ಉದ್ದೇಶದಿಂದ ಅಂಗಳದಲ್ಲಿದ್ದ ಅಡಿಕೆ ಮರದ ಸಲಾಕೆಯಿಂದ ಕಿಟ್ಟು ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದ. ಪರಿ ಣಾಮ ಕಿಟ್ಟು ಅವರು ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಅವರ ಪುತ್ರ ನಿತ್ಯಾನಂದ ಅವರು 108 ಆ್ಯಂಬುಲೆನ್ಸ್‌ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನಾÉಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ¨ªಾರೆ.
ಆರೋಪಿ ಹರ್ಷಿತ್‌ನನ್ನು ಪೊಲೀ ಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ¨ªಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.