Advertisement

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

12:14 PM Dec 18, 2024 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿ, ಬೈಕ್‌ಗೆ ಬೆಂಕಿ ಹಚ್ಚಿದಲ್ಲದೆ, 20 ದಿನಗಳ ತನ್ನ ಹಸುಗೂಸು ಕೊಲ್ಲುವುದಾಗಿ ಚಾಕು ಹಿಡಿದು ಬೆದರಿಕೆ ಹಾಕಿದ ಭಾವನನ್ನು ಭಾಮೈದರೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಸಿದ್ದಾಪುರ ನಿವಾಸಿ ಸಲ್ಮಾನ್‌ ಖಾನ್‌(30) ಹತ್ಯೆಯಾದವ. ಕೃತ್ಯ ಎಸಗಿದ ಸಲ್ಮಾನ್‌ ಖಾನ್‌ನ ಭಾಮೈದರಾದ ಉಮರ್‌ ಖಾನ್‌, ಸೈಯದ್‌ ಅನ್ವರ್‌ ಹಾಗೂ ಅವರ ಸ್ನೇಹಿತ ಶೊಯೇಬ್‌ ಅವರನ್ನು ಬಂಧಿಸಲಾಗಿದೆ.

ಮಂಗಳವಾರ ಮುಂಜಾನೆ 5.15ರ ಸುಮಾರಿಗೆ ದುರ್ಘ‌ಟನೆ ನಡೆದಿದೆ. ಕೊಲೆಯಾದ ಸಲ್ಮಾನ್‌ ಖಾನ್‌ ಬೀರು ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದ ಹಿಂದೆ ಆಯಿಷಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ 20 ದಿನಗಳ ಹಿಂದೆ ಮಗವೊಂದು ಜನಿಸಿತ್ತು. ಈ ಮಧ್ಯೆ ಸಲ್ಮಾನ್‌ ಖಾನ್‌ ನಾಲ್ಕೈದು ತಿಂಗಳಿಂದ ವಿಪರೀತಿ ಮದ್ಯ ವ್ಯಸನಿಯಾಗಿದ್ದು, ಕೆಲಸಕ್ಕೂ ಸರಿಯಾಗಿ ಹೋಗುತ್ತಿರಲಿಲ್ಲ. ಕುಡಿದು ಬಂದು ಪತ್ನಿ ಮೇಲೂ ಹಲ್ಲೆ ನಡೆಸುತ್ತಿದ್ದ. ಈ ಬಗ್ಗೆ ಹಿರಿಯರು ಬುದ್ದಿವಾದ ಹೇಳಿದರೂ, ಪದೇ ಪದೇ ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಬೈಕ್‌ಗೆ ಬೆಂಕಿ ಹಚ್ಚಿದ ಸಲ್ಮಾನ್‌ ಖಾನ್‌: ಈ ಮಧ್ಯೆ ಸಲ್ಮಾನ್‌ ಖಾನ್‌ ಕೆಲ ದಿನಗಳ ಹಿಂದೆ ಸ್ಥಳೀಯ ನಿವಾಸಿ ಶೋಯೆಬ್‌ ಎಂಬಾತನ ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ. ಈ ವೇಳೆ ಪತ್ನಿ ಆಯಿಷಾ ಸಹೋದರರು, ರಾಜಿ-ಸಂಧಾನ ಮಾಡಿದ್ದರು. ಆಗ ಶೋಯೆಬ್‌ ಪರವಾಗಿಯೇ ಎಲ್ಲರೂ ಮಾತನಾಡಿದ್ದರು. ಅದರಿಂದ ಕೋಪಗೊಂಡಿದ್ದ ಸಲ್ಮಾನ್‌, ಸೋಮವಾರ ತಡರಾತ್ರಿ ಮದ್ಯದ ಅಮಲಿನಲ್ಲಿ ಆಯಿಷಾ ಸೋದರ ಸಂಬಂಧಿಯ ಬೈಕ್‌ಗೆ ಬೆಂಕಿ ಹಚ್ಚಿದ್ದ. ಆಗ ಸ್ಥಳೀಯರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಸಲ್ಮಾನ್‌ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next