Advertisement

ಪಾಕ್‌ನಲ್ಲಿ ಎಫ್ಎಟಿಎಫ್ ಪರಿಶೀಲನೆ

11:56 PM Mar 25, 2019 | Team Udayavani |

ಇಸ್ಲಾಮಾಬಾದ್‌: ಹಣಕಾಸು ವಿಚಕ್ಷಣೆ ಕಾರ್ಯಪಡೆ (ಎಫ್ಎಟಿಎಫ್) ತಂಡವು ಪಾಕಿಸ್ಥಾನಕ್ಕೆ ಆಗಮಿಸಿದ್ದು, ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವ ಸಂಬಂಧ ಪಾಕ್‌ ಸೂಕ್ತ ಪ್ರಗತಿ ಸಾಧಿಸಿದೆಯೇ ಎಂಬುದನ್ನು ವಿಶ್ಲೇಷಿಸಲಿದೆ. ಪ್ಯಾರಿಸ್‌ ಮೂಲದ ಈ ಜಾಗತಿಕ ಸಂಸ್ಥೆ ಕಳೆದ ಕೆಲವೇ ದಿನಗಳ ಹಿಂದೆ ಪಾಕಿಸ್ಥಾನಕ್ಕೆ ಕಠಿಣ ಎಚ್ಚರಿಕೆ ನೀಡಿತ್ತು. ಅಲ್ಲದೆ, ಗ್ರೇ ಲಿಸ್ಟ್‌ನಲ್ಲೇ ಪಾಕಿಸ್ಥಾನವನ್ನು ಮುಂದುವರಿಸಿ ಉಗ್ರರಿಗೆ ಹಣಕಾಸು ನೆರವು ನೀಡುವ ವಿಚಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿತ್ತು. ಗುರುವಾರದ ವರೆಗೂ ತಂಡವು ವಿವಿಧ ಹಂತದ ಅಧಿಕಾರಿಗಳನ್ನು ಭೇಟಿ ಮಾಡಿ ವರದಿ ಪಡೆಯಲಿವೆ. ಪಾಕಿಸ್ಥಾನಕ್ಕೆ ಒಟ್ಟು 27 ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಇದರ ಪ್ರಗತಿಯನ್ನು ಪ್ರಮುಖವಾಗಿ ಸಮಿತಿ ಪರಿಶೀಲಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next