ಹೊಸದಿಲ್ಲಿ: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಮಧ್ಯ ಪ್ರದೇಶದ ಕುನೋ ಅರಣ್ಯಕ್ಕೆ ತಂದ ಚೀತಾಗಳಲ್ಲಿ ಕೆಲವು ಸಾವನ್ನಪ್ಪಿರುವುದು ಸಹಜ. ಚೀತಾಗಳು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಬೇಕಾದ ಕಾರಣ ಇದು ಸಹಜ ಎಂದು ಭಾರತದಲ್ಲಿನ ನಮೀಬಿಯಾ ಹೈ-ಕಮಿಷನರ್ ಗೇಬ್ರಿಯಲ್ ಸಿನಿಂಬೊ ಹೇಳಿದ್ದಾರೆ.
ಚೀತಾಗಳು ಭಾರತದ ಪರಿಸರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ODI World Cup 2023; ಭಾರತ ತಂಡ ಬಹುತೇಕ ಅಂತಿಮ; ಏಷ್ಯಾಕಪ್ ತಂಡದಲ್ಲಿರುವ ಇಬ್ಬರು ಔಟ್
ಈ ವರ್ಷದ ಮಾರ್ಚ್‌ನಿಂದ ಎರಡು ದೇಶಗಳಿಂದ ತಂದ 20 ಚೀತಾಗಳ ಪೈಕಿ ಒಂಬತ್ತು ಚೀತಾಗಳು ಈಗಾಗಲೇ ಸಾವನ್ನಪ್ಪಿವೆ.
“ನೀವು ಯಾವುದೇ ಪ್ರಾಣಿಗಳನ್ನು ಹೊಸ ವಾತಾವರಣಕ್ಕೆ ತಂದಾಗ ಸಾವಿನಂತೆ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ಯಾವುದೇ ಯೋಜನೆಯ ಭಾಗ” ಎಂದು ಸಿನಿಂಬೊ ಹೇಳಿದ್ದಾರೆ.
ಪ್ರಾಜೆಕ್ಟ್ ಚೀತಾ ಅಡಿಯಲ್ಲಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಒಟ್ಟು 20 ರೇಡಿಯೋ ಕಾಲರ್ ಚೀತಾಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ನಂತರ ನಮೀಬಿಯಾದ ಚಿರತೆ ‘ಜ್ವಾಲಾ’ಗೆ ನಾಲ್ಕು ಮರಿಗಳು ಜನಿಸಿದವು. ಈ 24 ಚೀತಾಗಳಲ್ಲಿ ಮೂರು ಮರಿಗಳು ಸೇರಿದಂತೆ ಒಂಬತ್ತು ಸಾವನ್ನಪ್ಪಿವೆ.