Advertisement

ಶರಾವತಿ ಮುಳುಗಡೆ ಸಂತ್ರಸ್ತರಿಂದ ಉಪವಾಸ ಸತ್ಯಾಗ್ರಹ

03:18 PM Nov 19, 2019 | Suhan S |

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಕೋಟಾದಡಿ ಸಿಕ್ಕ ಜಮೀನನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕು ಎಂದು ಸಂತ್ರಸ್ತ ಕುಟುಂಬವೊಂದು ಸೋಮವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದೆ.

Advertisement

ಭದ್ರಾವತಿ ತಾಲೂಕು ಕೆಂಚನಹಳ್ಳಿ ಕಾಲೋನಿ ನಿವಾಸಿ ಸೀತಾರಾಮ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಸರ್ಕಾರ ಸಂತ್ರಸ್ತರಿಗಾಗಿ ಜಮೀನು ನೀಡಿದ್ದರೂ ಕೂಡ ಅಧಿ  ಕಾರಿಗಳು ಇದುವರೆಗೂ ತಮಗೆ ಮಂಜೂರು ಮಾಡಿಲ್ಲ. ಸಾಗುವಳಿ ಮಾಡಲು ಕೂಡ ಆಗುತ್ತಿಲ್ಲ ಎಂದು ದೂರಿದರು.

ಮೂಲತಃ ಹೊಸನಗರ ತಾಲೂಕು ನಗರ ಹೋಬಳಿಯ ಇಂದ್ರೋಡಿ ಗ್ರಾಮದವರು ನಾವಾಗಿದ್ದು, ಶರಾವತಿ ಹಿನೀ°ರಲ್ಲಿಮುಳುಗಡೆಯಾಗಿದ್ದರಿಂದ ಭದ್ರಾವತಿ ತಾಲೂಕುಕೂಡ್ಲಿಗೆರೆ ಹೋಬಳಿ ಯರೆಹಳ್ಳಿ ಗ್ರಾಮದಲ್ಲಿ 1964ರಲ್ಲಿಯೇ 3 ಎಕರೆ ಜಮೀನಿಗೆ ಸಾಗುವಳಿ ಚೀಟಿ ಆದೇಶ ನೀಡಿದ್ದರು. ಈ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ದಾಖಲೆಗಳು ಕೂಡ ನಮ್ಮ ಹೆಸರಿಗೆ ಇವೆ. ಆದರೂ ಕೂಡ ಇದುವರೆಗೂ ನಮ್ಮ ಜಮೀನಿಗೆ ಪಕ್ಕಾ ಪೋಡು ಮಾಡಲು ಆಗಿಲ್ಲ. ಕಂದಾಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ. ಸಾಗುವಳಿ ಮಾಡಲು ಹೋದರೆ ಅರಣ್ಯ ಇಲಾಖೆಯವರು ತಡೆಯುತ್ತಾರೆ ಎಂದು ದೂರಿದರು.

ನಾವು ಈ ಜಮೀನನ್ನೇ ನಂಬಿ ಜೀವನ ಮಾಡುತ್ತಿದ್ದೇವೆ. ನಮಗೆ ಬೇರೆ ಎಲ್ಲಿಯೂ ಜಮೀನು ಇಲ್ಲ. ನಮ್ಮ ಜತೆಗಿದ್ದ ರೈತರೆಲ್ಲರಿಗೂ ಸಾಗುವಳಿ ಚೀಟಿ ನೀಡಲಾಗಿದೆ. ಆದರೆ ನಮಗೆ ಮಾತ್ರ ಆಗಿಲ್ಲ. ಈಗಲಾದರೂ ನಮಗೆ ಸಾಗುವಳಿ ಚೀಟಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ವಿಷ ಸೇವಿಸಿ ಪ್ರಾಣತ್ಯಾಗ ಮಾಡುತ್ತೇವೆ ಎಂದು ಮನವಿದಾರರು ಎಚ್ಚರಿಸಿದ್ದಾರೆ. ಸೀತಾರಾಮು, ಲಲಿತಮ್ಮ, ಮಹೇಶ್‌, ಮಹದೇವಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next