Advertisement

ಭೂ ಅಕ್ರಮ ಸ್ವಾಧೀನ ವಿರುದ್ಧ ಉಪವಾಸ ಸತ್ಯಾಗ್ರಹ: ಶಿವಾನಂದ

06:14 PM Oct 20, 2021 | Vishnudas Patil |

 ಸಾಗರ: ತಾಲೂಕಿನ ಬಳಸಗೋಡು ಸರ್ವೇ ನಂ.36ರಲ್ಲಿ 3.20 ಎಕರೆ ಜಾಗವನ್ನು ಅಕ್ರಮವಾಗಿ ಸ್ವಾ ಧೀನಪಡಿಸಿಕೊಂಡಿದ್ದಾರೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಮೊದಲಾದ ಜನಪರ ಸಂಘಟನೆಗಳ ಆಶ್ರಯದಲ್ಲಿ ಅ. 21ರಂದು ಬೆಳಗ್ಗೆ 11 ಗಂಟೆಯಿಂದ ಉಪವಿಭಾಗಾ ಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಬಳಸಗೋಡು ಅವರು ಹಿಂದೆ ಜಾಗ ಒತ್ತುವರಿ ಬಗ್ಗೆ ಉಪವಿಭಾಗಾಧಿ ಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಜಿಲ್ಲಾ ಧಿಕಾರಿಗಳ ಆದೇಶದಂತೆ ಒತ್ತುವರಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಒತ್ತುವರಿ ಮಾಡಿ ರಾತ್ರೋರಾತ್ರಿ ಮನೆ ಕಟ್ಟಲಾಗಿದೆ. ಇದಕ್ಕೆ ಕೆಲವು ಅಧಿ ಕಾರಿಗಳು ಬೆಂಬಲ ನೀಡುತ್ತಿದ್ದು, ತಕ್ಷಣ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಅನಿರ್ದಿಷ್ಟಾವ ಧಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು.

ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ ಬಳಸಗೋಡು ಮಾತನಾಡಿ, ಕೆಲವರು ಈ ಅಕ್ರಮ ಒತ್ತುವರಿಯ ಹಿಂದೆ ಇದ್ದಾರೆ. ಈ ಜಾಗವು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತಿದ್ದು, ಹಿಂದಿನ ಉಪ ವಿಭಾಗಾಧಿ ಕಾರಿಗಳಾಗಿದ್ದ ಪ್ರಸನ್ನ ಅವರು ಜಾಗ ತೆರವಿಗೆ ಸೂಚನೆ ನೀಡಿದ್ದರು. ಉಪವಾಸ ಸತ್ಯಾಗ್ರಹ ಕುಳಿತಿದ್ದಾಗ ಜಿಲ್ಲಾ ಧಿಕಾರಿಗಳು ತೆರವಿಗೆ ಆದೇಶ ಮಾಡಿದ್ದರು. ಸ್ವಲ್ಪದಿನಗಳ ಕಾಲ ಸುಮ್ಮನಿದ್ದ ಭೂ ಒತ್ತುವರಿದಾರರು ಈಗ ಅದೇ ಜಾಗದಲ್ಲಿ ಯಾರಧ್ದೋ ಕುಮ್ಮಕ್ಕಿನಿಂದ ರಾತ್ರೋರಾತ್ರಿ ಕಟ್ಟಡ ನಿರ್ಮಿಸಿ ಭೂ ಕಬಳಿಕೆ ಮಾಡುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಕೈವಾಡದ ಜೊತೆಗೆ ರಿಯಲ್‌ ಎಸ್ಟೇಟ್‌ ಮಾμಯಾ ಇದೆ ಎಂದು ದೂರಿದರು. ಗೋಷ್ಠಿಯಲ್ಲಿ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು, ಸಾಮಾಜಿಕ ಕಾರ್ಯಕರ್ತರಾದ ರಮೇಶ್‌ ಐಗಿನಬೈಲು, ಎಂ.ಎಸ್‌. ಶಶಿಕಾಂತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next