Advertisement
2017ರ ಡಿ.1ಕ್ಕಿಂತ ಮುನ್ನ ಮಾರಾಟವಾದ ವಾಹನಗಳಿಗೆ ಇದು ಅನ್ವಯವಾಗಲಿದೆ. 2017ರ ಡಿಸೆಂಬರ್‌ನ ಅನಂತರ ಮಾರಾಟವಾದ ಎಲ್ಲ ವಾಹನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೆ ಮುನ್ನವೇ ಫಾಸ್ಟಾಗ್ ಅಳವಡಿಸಿರಲಾಗುತ್ತದೆ. ಇದೇ ವೇಳೆ ವಾಹನವು ಫಾಸ್ಟಾಗ್ ಹೊಂದಿದ್ದರೆ ಮಾತ್ರ ಅದರ ಫಿಟೆ°ಸ್ ಪ್ರಮಾಣಪತ್ರ ನವೀಕರಿಸಲಾಗುತ್ತದೆ ಎಂದೂ ಸಚಿವಾಲಯ ತಿಳಿಸಿದೆ.
ಹೊಸದಿಲ್ಲಿ: ಮಳೆ, ಉಷ್ಣಾಂಶ, ವಾಯುಭಾರ ಕುಸಿತ ಇತ್ಯಾದಿ ಮುನ್ಸೂಚನೆಗಳನ್ನು ನೀಡುತ್ತಿದ್ದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ವರ್ಷದಿಂದ ಮಲೇರಿಯಾ ಹಾವಳಿಯ ಮುನ್ನೆಚ್ಚರಿಕೆಯನ್ನೂ ನೀಡಲಿದೆ! “ಹವಾಮಾನ ಮುನ್ಸೂಚನೆ ಇತ್ತೀಚೆಗಿನ ಸುಧಾರಣೆಗಳು’- ವಿಚಾರ ಕುರಿತು ನೀಡಿದ ಉಪನ್ಯಾಸದಲ್ಲಿ ಹವಾಮಾನ ತಜ್ಞ ಡಾ| ಎಂ. ರಾಜೀವನ್ ಈ ಮಾಹಿತಿ ನೀಡಿದ್ದಾರೆ. ಮಳೆ ಮತ್ತು ತಾಪಮಾನಗಳು ಮಲೇರಿಯಾ ಜತೆಗೆ ನಿಕಟ ಸಂಬಂಧ ಹೊಂದಿವೆ . ಮಲೇರಿಯಾ ಮುನ್ಸೂಚನೆಯನ್ನು ಐಎಂಡಿ ಮುಂದಿನ ವರ್ಷದಿಂದ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ. ಮಾನ್ಸೂನ್ ಸಂಬಂಧಿ ರೋಗಗಳಾದ ಡೆಂಗ್ಯೂ ಮತ್ತು ಕಾಲರಾ ಮುನ್ಸೂಚನೆಯನ್ನೂ ಮುಂಚಿತವಾಗಿ ತಿಳಿಯಬಹುದು ಎಂದಿದ್ದಾರೆ.