ಪಡುಬಿದ್ರಿ: ಟೋಲ್ ಗೇಟ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾದ ಕಾರಣ, ಫಾಸ್ಟ್ಯಾಗ್ ಮಾಡಿಸಿಕೊಳ್ಳದ ವಾಹನ ಸಾವರರು ದಂಡ ತೆತ್ತು ಟೋಲ್ ದಾಟುತ್ತಿರುವ ದೃಶ್ಯ ಹೆಜಮಾಡಿ ಟೋಲ್ ನಲ್ಲಿ ಕಂಡುಬಂತು.
ಕೆಲವು ವಾಹನ ಸವಾರರು ಅಸಮಾಧಾನ ತೋರ್ಪಡಿಸಿದ್ದು, ಪೊಲೀಸ್ ಕಾವಲು ಏರ್ಪಡಿಸಲಾಗಿದೆ.
ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿ ಸದಸ್ಯರು ಹೆಜಮಾಡಿ ಜನತೆಯ ವಾಹನಗಳಿಗೆ ಹಳೆ ಎಂಬಿಸಿ ರಸ್ತೆಯಲ್ಲಿನ ಟೋಲ್ ಗೇಟ್ ನಲ್ಲಿ ಮುಕ್ತವಾಗಿ ಬಿಡಲು ಮನವಿ ಮಾಡಿದ್ದಾರೆ. ಟೋಲ್ ಪ್ರಬಂಧಕ ಶಿವಪ್ರಸಾದ್ ರೈ ಈ ಕುರಿತು ಎನ್ಎಚ್ಎಐ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನಿತ್ತಿದ್ದಾರೆ.
ಇದನ್ನೂ ಓದಿ:ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ಭಾಗದ ರೈತರ ಹೊಸ ಪ್ರಯೋಗ
ಗುರುವಾರದೊಳಗೆ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಪಡುಬಿದ್ರಿ ಹಾಗೂ ಮೂಲ್ಕಿ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಭಟನೆಯನ್ನು ನಡೆಸುವುದಾಗಿ ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ ಹೆಜಮಾಡಿ ತಿಳಿಸಿದ್ದಾರೆ.
ಈ ನಡುವೆ ಕೇವಲ ನವಯುಗ ಅಧಿಕಾರಿಯನ್ನು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಬಿಡುತ್ತಿರುವ ಎನ್ಎಚ್ಎಐ ಅಧಿಕಾರಿ ಹೆದ್ದಾರಿ ಯೋಜನಾ ನಿರ್ದೇಶಕ ಶಿಶುಮೋಹನ್ ಕೇವಲ ರಿಮೋಟ್ ಕಂಟ್ರೋಲ್ ಆಗಿರೋದು ಸರಿಯಲ್ಲ. ನಾಳೆ ಬೆಳ್ಳಿಗ್ಗೆ ಜನರ ಅಹವಾಲನ್ನು ಆಲಿಸಲು ಹೆಜಮಾಡಿಯಲ್ಲಿ ಉಪಸ್ಥಿತರಿರುವಂತೆ ಪ್ರಾಧಿಕಾರದ ಕಿರಿಯ ಎಂಜೀನಿಯರ್ ರಲ್ಲಿ ಕಾಫು ವೃತ್ತ ನಿರೀಕ್ಷಕ ಪ್ರಕಾಶ್ ತಾಕೀತು ಮಾಡಿದ್ದಾರೆ.