ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರದ ನಿರ್ಧಾರದಿಂದ ಪ್ರಯಾಣಿಕರು ಸಾಕಷ್ಟುಸಮಸ್ಯೆ ಎದುರಿಸುವಂತಾಯಿತು.
ಫಾಸ್ಟ್ಯಾಗ್ ಇಲ್ಲದೇ ವಾಹನಸವಾರರು ದುಪ್ಪಟ್ಟು ದಂಡತೆರಬೇಕಾದರೆ, ಮತ್ತೆ ಕೆಲವರು ಫಾಸ್ಟ್ಯಾಗ್ ಯಂತ್ರಗಳು ಸಮಯಕ್ಕೆ ಸರಿಯಾಗಿ ಸಮರ್ಪಕಕಾರ್ಯನಿರ್ವಹಿಸದ ಕಾರಣ ಟೋಲ್ ಬೂತ್‌ಗಳಲ್ಲಿ ಕಾಯ್ದುಕೊಂಡು ನಿಲ್ಲ ಬೇಕಾಗಿತ್ತು.
ಲೋಕಲ್ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್‌ಗಳ ಸುತ್ತಮುತ್ತಲಿನ ಗ್ರಾಮಗಳ ವಾಹನ ಸವಾರರಿಗೆ ಉಚಿತ ಟೋಲ್ ಮೂಲಕಹಾದು ಹೋಗಲು ಅವಕಾಶಕಲ್ಪಿಸಬೇಕು. ಆದರೆ, ಇದೂವರೆಗೂ ಬೂತ್‌ನಲ್ಲಿ ಟೋಲ್ ಉದ್ಯೋಗಿಗಳುಕುಳಿತು ಶುಲ್ಕ ಸಂಗ್ರಹ ಮಾಡುತಿದ್ದರು. ಈ ವೇಳೆ ಶುಲ್ಕ ಪಾವತಿ ಮಾಡುವವರಿಗೆಸೂಕ್ತ ರೀತಿಯ ಚಿಲ್ಲರೆ ಕೊಟ್ಟು ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿದ್ದರು. ಆದರೆ ಫಾಸ್ಟಾಗ್‌ನಿಂದ ನಗದಿ ವಹಿವಾಟು ಸ್ಥಗಿತಗೊಂಡಿದ್ದು, ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಹೆದ್ದಾರಿ ಪ್ರಯಾಣಿಕ ತಿಮ್ಮೇಗೌಡ ಪ್ರತಿಕ್ರಿಯಿಸಿ, ಫಾಸ್ಟ್ಯಾಗ್ ಜಾರಿಯಿಂದ ಸುಲಭ ಸಂಚಾರಕ್ಕೆ ಅನುಕೂಲವಾದರೂ, ಸಾಕಷ್ಟು ಸಮಸ್ಯೆಗಳನ್ನು ಸ್ಥಳೀಯರು ಅನುಭವಿಸುವಂತಾಗಿದೆ. ಯಾವುದೇ ಯೋಜನೆ ಜಾರಿಗೆ ತರುವ ಮೊದಲುಪೂರ್ವಾಪರ ಚಿಂತನೆ ನಡೆಸಬೇಕಾಗಿದೆ ಎಂದರು.
ಟೋಲ್ ಪಾಸ್: ಸ್ಥಳೀಯರು ತಮ್ಮ ವಯಕ್ತಿಕ ಹಾಗೂ ವಾಹನಗಳ ದಾಖಲೆನೀಡುವ ಮೂಲಕ ಪಾಸ್ಟಾಗ್ ನಂಬರ್ ಜತೆ ಟೋಲ್ ಘಟಕಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಆಯಾ ಟೋಲ್‌ಗಳಲ್ಲಿ ಸ್ಥಳೀಯರೆಂದು ಪ್ರತಿಟೋಲ್‌ಗೆ ಮಾಸಿಕ ಪಾಸ್ 150 ರೂ.ಪಾವತಿಸಿಕೊಂಡು ಓಡಾಡಬಹುದಾಗಿದೆ ಎಂದು ಹೆಸರೇಳಲಿಚ್ಚಿಸದ ಟೋಲ್ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಸರ್ವಿಸ್ ರಸ್ತೆ ಇಲ್ಲ : ಹೆದ್ದಾರಿ ಶುಲ್ಕ ಪಾವತಿ ಮಾಡಲಿಚ್ಚಿಸದವರಿಗೆ ಸರ್ವಿಸ್ ರಸ್ತೆ ಕಲ್ಪಿಸಿ ಕೊಡಬೇಕು. ಆದರೆ, ಬೆಂಗಳೂರು- ಮಂಗಳೂರು ಹೆದ್ದಾರಿ ಯಲ್ಲಿರುವ ಲ್ಯಾಂಕೋ ದೇವಿಹಳ್ಳಿ ಟೋಲ್ ಹಾಗೂಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಜಾಸ್ ಟೋಲ್‌ಗಳಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣಕ್ಕೆ ಹೆದ್ದಾರಿ ಪ್ರಯಾಣಿಕರು ಕಡ್ಡಾಯವಾಗಿ ಶುಲ್ಕ ಪಾವತಿಸಬೇಕಾಯಿತು.