Advertisement
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಾದು ಹೋಗುವ 2 ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ತಲಪಾಡಿಯಲ್ಲಿ ಸ್ಥಳೀಯ ಪಂಚಾ ಯತ್ ವ್ಯಾಪ್ತಿ, ಹೆಜಮಾಡಿಯಲ್ಲಿ ಸ್ಥಳೀಯ ಗ್ರಾಮದವರು ಮತ್ತು ಪಡುಬಿದ್ರಿಯಲ್ಲಿ ಸ್ಥಳೀಯ ಟ್ಯಾಕ್ಸಿಗಳಿಗೆ ಶುಲ್ಕ ವಿನಾಯಿತಿ ಇದೆ. ಬೈಂದೂರು- ಶಿರೂರಿನಲ್ಲಿ ಸ್ಥಳೀಯ 5 ಕಿ.ಮೀ. ವ್ಯಾಪ್ತಿ, ಸಾಸ್ತಾನದಲ್ಲಿ ಕೋಟ ಜಿ.ಪಂ. ವ್ಯಾಪ್ತಿಯ ಎಲ್ಲ ವಾಹನಗಳಿಗೆ ವಿನಾಯಿತಿ ಇದೆ. ಆದರೆ ಫಾಸ್ಟ್ಯಾಗ್ ಕಡ್ಡಾಯವಾದ ಬಳಿಕ ಈ ಎಲ್ಲ ರಿಯಾಯಿತಿ ಗಳನ್ನು ರದ್ದುಪಡಿಸುವುದಾಗಿ ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ. 20 ಕಿ.ಮೀ. ವ್ಯಾಪ್ತಿಯ ಖಾಸಗಿ ಕಾರುಗಳಿಗೆ ನೀಡ ಲಾಗುವ 275 ರೂ. ಮಾಸಿಕ ಪಾಸ್ ವ್ಯವಸ್ಥೆ ಮಾತ್ರ ಇರಲಿದೆ ಎಂದಿದ್ದಾರೆ.
Related Articles
Advertisement
ಸಾಸ್ತಾನದ ರಾ.ಹೆ. ಹೋರಾಟ ಸಮಿತಿಯವರು ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ನಮ್ಮ ಮನವಿಯನ್ನು ತಿರಸ್ಕರಿಸಿ ಫೆ. 15ರ ಮಧ್ಯರಾತ್ರಿಯಿಂದ ಸ್ಥಳೀಯರಿಂದಲೂ ಟೋಲ್ ವಸೂಲಿ ಆರಂಭಿಸಿದಲ್ಲಿ ಕರ ನಿರಾಕರಿಸಿ ವಾಹನಗಳನ್ನು ಟೋಲ್‌ನಲ್ಲೇ ನಿಲ್ಲಿಸಲು ಕರೆ ನೀಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ರವಿವಾರ ಸಂಜೆ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು, ಜಿಲ್ಲೆಯ ಮೂರು ಟೋಲ್‌ಗಳ ಪ್ರಬಂಧಕ ಶಿವಪ್ರಸಾದ್ ರೈ ಮತ್ತು ಸಿಬಂದಿಯ ಜತೆ ಕೋಟ ಪೊಲೀಸ್ ಠಾಣಾಧಿಕಾರಿಗಳು, ಬ್ರಹ್ಮಾವರ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ಮಾತುಕತೆ ನಡೆಯಿತು. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ದಿಶಾ ಸಭೆ ನಡೆಸಿ ಪರಿಹಾರ ಸೂಚಿಸುವುದಾಗಿ ತಿಳಿಸಿದ್ದು, ಆ ಸಭೆಯ ಬಳಿಕ ವಿನಾಯಿತಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯ ತನಕ ಸ್ಥಳೀಯರಿಗೆ ಶುಲ್ಕ ಕಡ್ಡಾಯಗೊಳಿಸಬಾರದು ಎಂದು ಜಾಗೃತಿ ಸಮಿತಿಯವರು ಆಗ್ರಹಿಸಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ತಿಳಿಸುವುದಾಗಿ ಟೋಲ್ ಅಧಿಕಾರಿಗಳು ಹೇಳಿದ್ದಾರೆ.
ದ.ಕ., ಉಡುಪಿ ಟೋಲ್: ಪ್ರಸ್ತುತ ಫಾಸ್ಟ್ಯಾಗ್ ಸಂಚಾರ
ಪ್ರದೇಶ ಫಾಸ್ಟ್ಯಾಗ್ ಸಂಚಾರ ಪ್ರಮಾಣ (ಶೇ.)
ಹೆಜಮಾಡಿ 72
ಸಾಸ್ತಾನ 71
ತಲಪಾಡಿ 60
ಬೈಂದೂರು ಶಿರೂರು 68
ಬ್ರಹ್ಮರಕೂಟ್ಲು 89
ಸುರತ್ಕಲ್ 90
ಫ್ರೀ ಲೇನ್ ಹೊರತುಪಡಿಸಿ
ಸ್ಥಳೀಯರಿಗೆ ಶುಲ್ಕ ವಿನಾಯಿತಿ ಮುಂದುವರಿಯ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದು, ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಭೆ ನಡೆಯುವ ತನಕ ಟೋಲ್ ಕಡ್ಡಾಯಗೊಳಿಸಬಾರದು. ಮನವಿಯನ್ನು ತಿರಸ್ಕರಿಸಿದರೆ ಸ್ಥಳೀಯರು ಕರ ನಿರಾಕರಿಸಲಿದ್ದಾರೆ.. – ಪ್ರತಾಪ್ ಶೆಟ್ಟಿ ಸಾಸ್ತಾನ, ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರು
ಕೇಂದ್ರ ಸರಕಾರದ ಆದೇಶದಂತೆ ಫಾಸ್ಟ್ಯಾಗ್ ಕಡ್ಡಾಯವಾಗುತ್ತಿದೆ. ಹಿಂದಿನ ಎಲ್ಲ ರಿಯಾಯಿತಿಗಳನ್ನು ರದ್ದುಪಡಿಸಲಾಗುವುದು. ಸ್ಥಳೀಯ ಖಾಸಗಿ ಕಾರಿನವರು ಮಾಸಿಕ ಪಾಸ್ ಖರೀದಿಸಬೇಕು. ಇನ್ನೂ
ಫಾಸ್ಟ್ಯಾಗ್‌ಅಳವಡಿಸಿಕೊಳ್ಳದವರು ಟೋಲ್‌ಗಳಲ್ಲಿ ವಾಹನದ ಆರ್.ಸಿ., ಆಧಾರ್, ಪಾನ್‌ಕಾರ್ಡ್ ಪ್ರತಿ ಹಾಜರುಪಡಿಸಿ ಸ್ಥಳದಲ್ಲೇ ಫಾಸ್ಟ್ಯಾಗ್ ಪಡೆಯಬಹುದು. – ಶಿಶುಮೋಹನ್, ಎನ್‌ಎಚ್‌ಎಐ ಯೋಜನ ನಿರ್ದೇಶಕ