Advertisement

ಶೀಘ್ರ ಕೇಬಲ್‌ ಮಾದರಿ ರೈಲು ಸೇತುವೆ ಸಿದ್ಧ; ಎಲ್ಲಿಂದ ಎಲ್ಲಿಗೆ ಸಂಪರ್ಕ?

12:03 AM Mar 26, 2023 | Team Udayavani |

ದೇಶದ ಮೊತ್ತ ಮೊದಲ ಕೇಬಲ್‌ ರೀತಿಯಲ್ಲಿ ನಿರ್ಮಾಣವಾಗುತ್ತಿರುವ ಅಂಜಿ ಖಡ್‌ ರೈಲ್ವೇ ಸೇತುವೆ ಮೇನಲ್ಲಿ ಮುಕ್ತಾಯವಾಗುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಅದನ್ನು ನಿರ್ಮಾಣ ಮಾಡಲಾಗುತ್ತಿದೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ (ಯುಎಸ್‌ಬಿಆರ್‌ಎಲ್‌) ನಡುವಿನ ರೈಲು ಯೋಜನೆಯ ಅಂಗವಾಗಿ ಅದನ್ನು ಭಾರತೀಯ ರೈಲ್ವೇ ನಿರ್ಮಿಸುತ್ತಿದೆ.

Advertisement

ಏನು ವಿಶೇಷತೆ?
– ದೇಶದಲ್ಲಿಯೇ ಮೊದಲ ಬಾರಿಗೆ ಕೇಬಲ್‌ ಶೈಲಿಯಲ್ಲಿ ಸೇತುವೆ ನಿರ್ಮಾಣ
– ಟನೆಲ್‌ 2 ಮತ್ತು ಟನೆಲ್‌ 3ರ ಮೂಲಕ ಸೇತುವೆಗೆ ಸಂಪರ್ಕ
– ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಇತರ ಭಾಗದ ಜತೆಗೆ ಸಂಪರ್ಕಿಸಲು ಇದು ಅನುಕೂಲ

ಎಲ್ಲಿಂದ ಎಲ್ಲಿಗೆ ಸಂಪರ್ಕ?- ಕಟ್ರಾದಿಂದ ರಿಯಾಸಿಗೆ
15 ಮೀಟರ್‌- ಡೆಕ್‌ನ ಅಗಲ
725 ಮೀಟರ್‌- ಸೇತುವೆಯ ಒಟ್ಟು ಉದ್ದ
473.25 ಮೀಟರ್‌- ಪ್ರಧಾನ ಸೇತುವೆಯ ಉದ್ದ
100 ಕಿಮೀ ವೇಗ- ರೈಲು ಸಂಚರಿಸಲಿರುವ ವೇಗ
ಗಂಟೆಗೆ 213 ಕಿಮೀ ವೇಗದಲ್ಲಿ ಬೀಸುವ ಗಾಳಿಯನ್ನು ಎದುರಿಸುವ ಸಾಮರ್ಥ್ಯ
96- ಸೇತುವೆಯಲ್ಲಿ ಇರುವ ಕೇಬಲ್‌ಗ‌ಳು

ಉಧಂಪುರ-ಬನಿಹಾಲ್‌ ಸಂಪರ್ಕಿಸುವ ರೈಲ್ವೇ ಕಾಮಗಾರಿ ವರ್ಷಾಂತ್ಯಕ್ಕೆ ಮುಗಿಯಲಿದೆ. ವರ್ಷಾಂತ್ಯ ಅಥವಾ ಮುಂದಿನ ವರ್ಷ ಅಲ್ಲಿ ರೈಲುಗಳ ಸಂಚಾರ ಶುರುವಾಗುವ ನಿರೀಕ್ಷೆ ಇದೆ. ಅದರಲ್ಲಿ ವಂದೇ ಭಾರತ್‌ ರೈಲುಗಳು ಸಂಚರಿಸಲೂ ಸಾಧ್ಯವಿದೆ.
-ಅಶ್ವಿ‌ನಿ ವೈಷ್ಣವ್‌, ರೈಲ್ವೇ ಸಚಿವ

 

Advertisement
Advertisement

Udayavani is now on Telegram. Click here to join our channel and stay updated with the latest news.

Next