Advertisement

ಫಾಸ್ಟ್‌ ಆ್ಯಂಡ್‌ ಫ್ಯಾಶನ್‌

12:26 PM Aug 30, 2017 | |

ಕಾಲ ಅನ್ನೋದು ಎಲ್ಲವನ್ನೂ ಬದಲಿಸಿ ಬಿಡುತ್ತದೆ. ಫ್ಯಾಶನ್‌ ಲೋಕದಲ್ಲಿ ಕಾಲದ ಕೈ ಚಳಕ ಬಲುಜೋರು. ನಿನ್ನೆಯ ಟ್ರೆಂಡ್‌ ಇವತ್ತಿಗೆ ಹಳೆಯದಾದರೆ, ಇವತ್ತಿನದು ನಾಳೆಗೆ ಔಟ್‌ಡೇಟೆಡ್‌. ಈ ಬದಲಾವಣೆಯ ಗಾಳಿ, ನಮಗೆ ಎಲ್ಲ ಕಡೆಯಿಂದಲೂ ಬೀಸುತ್ತಿದೆ. ನಮಗೇ ಗೊತ್ತಿಲ್ಲದಂತೆ ನಮ್ಮ ಸುತ್ತಮುತ್ತಲಿನ ಹಲವಾರು ಸಂಗತಿಗಳು ನಮ್ಮನ್ನು, ನಮ್ಮ ಡ್ರೆಸ್ಸಿಂಗ್‌ ಸ್ಟೈಲನ್ನು ಬದಲಿಸುತ್ತಿವೆ…
  
 1. ಸಿನಿಮಾ- ಸೀರಿಯಲ್‌
ನಾವೆಲ್ಲರೂ ಸಿನಿಮಾ, ಸೀರಿಯಲ್‌ಗ‌ಳನ್ನು ನೋಡ್ತೀವಿ. ಅದರಲ್ಲಿ ತೋರಿಸುವ ಅವೆಷ್ಟೋ ಸಂಗತಿಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಇನ್ನು ನಟ- ನಟಿಯರು ಧರಿಸುವ ಬಟ್ಟೆಗಳು ಕಣ್ಸೆಳೆಯದೇ ಬಿಟ್ಟಾವೇ? ಯಾಕೆಂದರೆ, ಫ್ಯಾಶನ್‌ ಲೋಕಕ್ಕೆ ತೀರಾ ಹತ್ತಿರದಲ್ಲಿರುವ ಅವರಿಂದಲೇ ನಮಗೆ ಹೊಸ ಟ್ರೆಂಡ್‌ಗಳ ಪರಿಚಯವಾಗುವುದು. ಹಾಗಾಗಿಯೇ, ವಸ್ತ್ರ ವಿನ್ಯಾಸಕ್ಕೆ ಅವರು ಜಾಸ್ತಿ ಗಮನ ಕೊಡ್ತಾರೆ.

Advertisement

2. ಮೀಡಿಯಾ ಪ್ರಭಾವ 
ಲೇಟೆಸ್ಟ್‌ ಫ್ಯಾಶನ್‌ ಬಗ್ಗೆ ಮಾಧ್ಯಮದಿಂದ ನಮಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಯಾವ ಟ್ರೆಂಡ್‌ ಈಗ ಸುದ್ದಿಯಲ್ಲಿದೆ, ನೆಚ್ಚಿನ ನಟಿಯ ಡಿಸೈನರ್‌ ಲೆಹೆಂಗಾದ ಬೆಲೆ ಎಷ್ಟು, ಬಾಲಿವುಡ್‌ನ‌ಲ್ಲಿ ಯಾವ ಫ್ಯಾಶನ್‌ ಚಾಲ್ತಿಯಲ್ಲಿದೆ… ಎಂಬೆಲ್ಲಾ ಮಾಹಿತಿಗಳನ್ನು ಪಡೆಯಬಹುದು. ನೆಚ್ಚಿನ ನಟಿಯ ಬಟ್ಟೆಯಿಂದ ಹಿಡಿದು, ಹೇರ್‌ಸ್ಟೈಲ್‌ ಕೂಡ ಅನುಕರಿಸುವ ಅಭಿಮಾನಿಗಳಿದ್ದಾರೆ.

3. ಸಾಕ್ಷರತೆಯ ಕ್ರಾಂತಿ
ಇತ್ತೀಚೆಗೆ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ಕಾಲೇಜಿನ ಕಡೆ ಮುಖ ಮಾಡುತ್ತಿರುವ ಹಳ್ಳಿ ಮಕ್ಕಳಿಂದ ಪೇಟೆಯ ಗಾಳಿ ಹಳ್ಳಿಗೂ ಬೀಸುತ್ತಿದೆ. ಶಿಕ್ಷಣದಿಂದ ನಮ್ಮ ಆಲೋಚನೆ, ಜೀವನಶೈಲಿ ಎಲ್ಲವೂ ಆಧುನಿಕತೆಗೆ ತೆರೆದುಕೊಂಡಿದೆ. 

4. ರಿಯಾಲಿಟಿ ಶೋಗಳು
ಇತ್ತೀಚೆಗೆ ರಿಯಾಲಿಟಿ ಶೋಗಳ ಸಂಖ್ಯೆ ಹೆಚ್ಚುತ್ತಿವೆ. ಅದರಲ್ಲಿ ಭಾಗವಹಿಸುವ ನಿರೂಪಕರು, ಜಡ್ಜ್ಗಳು, ಸ್ಪರ್ಧಿಗಳು ಧರಿಸುವ ಬಟ್ಟೆಗಳು ಎಲ್ಲರನ್ನೂ ಸೆಳೆಯುವುದರಲ್ಲಿ ಅಚ್ಚರಿಯಿಲ್ಲ. “ಅರೇ, ಇಂಥದ್ದೊಂದು ಟ್ರೆಂಡ್‌ ಬಂದಿದ್ಯಾ? ಗೊತ್ತೇ ಇರಲಿಲ್ಲ, ನಾನೂ ಇಂಥದ್ದೊಂದು ತೆಗೆದುಕೊಳ್ಳಬೇಕು’ ಅನ್ನಿಸುತ್ತದೆ.  

5. ವಿದೇಶಿ ವಿನಿಮಯ
ಮೊದಲೆಲ್ಲಾ ವಿದೇಶವೆಂದರೆ ದೂರ ಅನಿಸುತ್ತಿತ್ತು. ಆದರೀಗ ಅದು ನೆರೆಮನೆಯಷ್ಟೇ ಸಮೀಪ. ವಿದೇಶೀ ಫ್ಯಾಶನ್‌ ಟ್ರೆಂಡ್‌ಗಳು ಈಗ ನಮ್ಮ ವಾರ್ಡ್‌ರೋಬ್‌ ಸೇರಲು ಹೆಚ್ಚು ಸಮಯ ಬೇಕಿಲ್ಲ. ಅಲ್ಲಿ ಅನಿವಾರ್ಯವಾಗಿ ಬಳಸುವ ಉಡುಪುಗಳು ಇಲ್ಲಿ ಲೇಟೆಸ್ಟ್‌ ಫ್ಯಾಶನ್‌ ಎಂಬ ಹೆಸರಿನಲ್ಲಿ ರೂಪಾಂತರಗೊಂಡು ಹೊಸ ಟ್ರೆಂಡ್‌ ಸೃಷ್ಟಿಸುತ್ತಲಿವೆ.

Advertisement

6. ಕಂಫ‌ರ್ಟ್‌
ನಮ್ಮ ಉಡುಪಿನಲ್ಲಿ ಗಣನೀಯ ಬದಲಾವಣೆಯಾಗಿರುವುದಕ್ಕೆ ನಾವು ಕೊಡುವ ಕಾರಣ “ಕಂಫ‌ರ್ಟ್‌’. ಸೀರೆ ಉಟ್ಟು ಕೆಲಸ ಮಾಡೋಕೆ, ಗಾಡಿ ಓಡ್ಸೋಕೆ ಆಗಲ್ಲ ಅಂತ ಜೀನ್ಸ್‌, ಸ್ಕರ್ಟ್‌ ಮೊರೆ ಹೋದವರು ನಾವು. ಜೀನ್ಸ್‌, ಲೆಗ್ಗಿನ್‌, ಜೆಗ್ಗಿನ್‌, ಮಿನಿಸ್ಕರ್ಟ್‌, ಸ್ಲಿàವ್‌ಲೆಸ್‌ ಟಾಪ್‌, ಟೀ ಶರ್ಟ್‌ ಹೀಗೆ ಕಂಫ‌ರ್ಟ್‌ ಹೆಸರಲ್ಲಿ ಏನೇನೆಲ್ಲಾ ಬಂದಿವೆ.

ಮೇಘಾ ಗೊರವರ, ನವನಗರ

Advertisement

Udayavani is now on Telegram. Click here to join our channel and stay updated with the latest news.

Next