Advertisement
ಕೇಸರಿ ಬಿಳಿ ಹಸಿರು ಅಂಗಿಭಾರತ ಧ್ವಜದಲ್ಲಿರುವ ಮೂರು ವರ್ಣಗಳನ್ನು ಹೊಂದಿರುವ ಸೀರೆ, ದುಪ್ಪಟ್ಟಾ, ಚೂಡಿದಾರ್, ಲೆಹೆಂಗಾಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದಕ್ಕಿಂತ ಹೆಚ್ಚು ಬಣ್ಣಗಳುಳ್ಳ “ಕಲರ್ ಬ್ಲಾಕ್’ ಟ್ರೆಂಡ್‌ನ ದಿರಿಸುಗಳಲ್ಲಿ ನಮ್ಮ ಧ್ವಜದ ತ್ರಿವರ್ಣ ಸಿಕ್ಕರೆ ಕೊಳ್ಳಬಹುದು. ಕೆಲ ದಿರಿಸುಗಳಲ್ಲಿ ತ್ರಿವರ್ಣಗಳು ಒಟ್ಟಿಗೆ ಇಲ್ಲದೇ ಹೋದರೂ ಭಾರತ ಧ್ವಜವನ್ನು ನೆನಪಿಸುವಂತೆ 2 ವರ್ಣಗಳಿರುತ್ತವೆ. ಅವುಗಳನ್ನು ಈ ದಿನ ಉಡಬಹುದು. ಅನೇಕ ಸೆಲಬ್ರಿಟಿಗಳು ಈ ಟಿಪ್ಸ್‌ಅನ್ನು ಈಗಾಗಲೇ ಪ್ರಚುರಪಡಿಸಿದ್ದಾರೆ. ಧ್ವಜದ ವಿನ್ಯಾಸ ಸಿಕ್ಕದೇ ಇದ್ದರೆ ಬೇಸರ ಬೇಡ ಮಿಕ್ಸ್ ಅಂಡ್ ಮ್ಯಾಚ್ ಕೂಡಾ ಮಾಡಬಹುದು. ತ್ರಿವರ್ಣವಲ್ಲದೆ ಖಾದಿ ಉಡುಪುಗಳನ್ನು ಧರಿಸುವ ಮೂಲಕವೂ ರಾಷ್ಟ್ರಪ್ರೇಮ ಮೆರೆಯಬಹುದು.
ತ್ರಿವರ್ಣ ವಿನ್ಯಾಸದ ದಿರಿಸುಗಳನ್ನು ಆರಿಸುವ ಸಂಕಷ್ಟ ಬಳೆಯ ವಿಷಯದಲ್ಲಿಲ್ಲ. ಯಾವುದೇ ಬ್ಯಾಂಗಲ್ ಸ್ಟೋರ್‌ಗೆ ಹೋದರೂ ಕೇಸರಿ ಬಿಳಿ ಹಸಿರು ಬಣ್ಣಗಳ ಬಳೆ ಸಿಕ್ಕೇ ಸಿಗುತ್ತವೆ. ಅವು ಮೂರನ್ನೂ ಧ್ವಜದ ಹಾಗೆ ಒಂದೇ ಕೈಗೆ ತೊಟ್ಟರೆ ಇಂಡಿಪೆಂಡೆನ್ಸ್ ಡೇ ಸ್ಪೆಷಲ್ ಆಗುವುದು ಖಂಡಿತ. ಅಲ್ಲದೆ ಇವುಗಳು ಸಾಂಪ್ರದಾಯಿಕ ಲುಕ್ಕನ್ನೂ ಕೊಡುವುದರ ಜೊತೆ, ವಿಶೇಷ ಮೆರುಗನ್ನೂ ನೀಡುತ್ತೆ. ಬಳೆಗಳಂತೆಯೇ ತ್ರಿವರ್ಣ, ವಿನ್ಯಾಸವಿರುವ ಕಿವಿಯೋಲೆ, ಬ್ರೇಸ್‌ಲೆಟ್, ಸರ ಮುಂತಾದ ಟ್ರೈ ಕಲರ್ ಆಕ್ಸೆಸರೀಸ್‌ಅನ್ನು ಧರಿಸಬಹುದು. ಉಗುರಿಗೆ ಬಣ್ಣ
ಮೂರು ಪ್ರತ್ಯೇಕ ಬಣ್ಣಗಳ ನೇಲ್ ಪಾಲಿಶ್‌ಅನ್ನು ಕೊಂಡು ತಂದು ಉಗುರಿಗೆ ಬಣ್ಣ ಹಚ್ಚುವುದು ಸ್ವಾತಂತ್ರÂ ದಿನದಂದು ಮಾಡಬಹುದಾದ ಸುಲಭವಾದ ಮೇಕ್ ಓವರ್. ಇದು ತುಂಬಾ ಸಿಂಪಲ್ ಆಯ್ತು ಎನ್ನುವವರು ನೇಲ್ ಆರ್ಟ್‌ನ ಮೊರೆ ಹೋಗಬಹುದು. ನೇಲ್ ಆರ್ಟ್ ಮೂಲಕ ಪ್ರತಿ ಕೈಬೆರಳ ಉಗುರಿನ ಮೇಲೆ ತ್ರಿವರ್ಣ ಧ್ವಜವನ್ನು ಬಿಡಿಸಬಹುದು. ಸ್ಟೈಲಿಸ್ಟ್ ಅಥವಾ ಪರಿಣತ ಸ್ನೇಹಿತರ ನೆರವನ್ನು ಪಡೆದುಕೊಳ್ಳಬಹುದು.
Related Articles
Advertisement