Advertisement

ಫ್ಲಿಪ್‌ಕಾರ್ಟ್‌ ನಿಂದ ಹಬ್ಬದ ಸೀಸನ್‌ಗಾಗಿ ಫ್ಯಾಷನ್‌ ಸಂಗ್ರಹ

09:33 PM Aug 25, 2022 | Team Udayavani |

ಬೆಂಗಳೂರು: ಮುಂಬರುವ ಹಬ್ಬದ ಸೀಸನ್ ಮತ್ತು ಬಹು ನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಬರುತ್ತಿರುವ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ಇಂದು ಹೊಸ ಶರತ್ಕಾಲ-ಚಳಿಗಾಲದ ಫ್ಯಾಷನ್‌ ಸಂಗ್ರಹವನ್ನು ತನ್ನ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಿದೆ.

Advertisement

ಭಾರತದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಟಾಪ್ ಬ್ರ್ಯಾಂಡ್ ಗಳ ಲಕ್ಷಾಂತರ ಹೊಸ ಸ್ಟೈಲಿಶ್ ಫ್ಯಾಷನ್‌ ಸಂಗ್ರಹವನ್ನು ಹೊಂದಿದೆ. ಸಿದ್ಧ ಉಡುಪು, ಅಕ್ಸೆಸರಿಗಳು ಮತ್ತು ಪಾದರಕ್ಷೆಗಳು ಸೇರಿದಂತೆ ಇನ್ನೂ ಹಲವು ವಿಭಾಗಗಳ ಉತ್ಪನ್ನಗಳು ಲಭ್ಯವಿವೆ. ಈ ಹಿಂದಿನ ಬೇಸಿಗೆ ಸೀಸನ್ ಮತ್ತು ಎಂಡ್ ಆಫ್ ಸೀಸನ್ ಸೇಲ್ ನಲ್ಲಿ ಎಲ್ಲಾ ವರ್ಗದ ಶಾಪರ್ ಗಳು ಗಣನೀಯ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ಈ ಹೊಸ ಸೀಸನ್ ನ ಬಿಡುಗಡೆಯು ದೇಶದ ಮೆಟ್ರೋ ನಗರಗಳು ಮತ್ತು 2 ನೇ ಶ್ರೇಣಿಯ ಪ್ರದೇಶಗಳಲ್ಲಿರುವ ಮಿಲಿಯನ್ ಗಟ್ಟಲೆ ಗ್ರಾಹಕರಿಗೆ ಕ್ಯುರೇಟೆಡ್ ಫ್ಯಾಶನ್ ಮತ್ತು ಲೈಫ್ ಸ್ಟೈಲ್ ಆಫರ್ ಗಳನ್ನು ನೀಡಲಿದೆ.

ಇದಲ್ಲದೇ, ಶರತ್ಕಾಲ ಚಳಿಗಾಲದ ಸಂಗ್ರಹವನ್ನು ಪರಿಚಯಿಸುತ್ತಿರುವ ಫ್ಲಿಪ್ ಕಾರ್ಟ್ ಮುಂಬರುವ ಹಬ್ಬದ ಸೀಸನ್ ಗಾಗಿ ಹಲವಾರು ತಂತ್ರಜ್ಞಾನ ನೇತೃತ್ವದ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಪರಿಷ್ಕೃತವಾದ ಶಾಪಿಂಗ್ ಅನುಭವವನ್ನು ಒದಗಿಸಲು ಸಜ್ಜಾಗಿದೆ.

ಫ್ಲಿಪ್ ಕಾರ್ಟ್ ಸಾಮಾಜಿಕ ಮಾಧ್ಯಮದಲ್ಲಿ ಪ್ಲಾಟ್ ಫಾರ್ಮ್ ನ ವಿಸ್ತಾರವಾದ ಶರತ್ಕಾಲ-ಚಳಿಗಾಲದ ಫ್ಯಾಶನ್ ಕ್ಯುರೇಶನ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ #NewForYou ಅಭಿಯಾನಕ್ಕಾಗಿ ಫ್ಯಾಶನ್ ಮತ್ತು ಲೈಫ್ ಸ್ಟೈಲ್ ನಾದ್ಯಂತ 100 ಕ್ಕೂ ಹೆಚ್ಚು ಮಾರಾಟಗಾರರೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

ಫ್ಲಿಪ್ ಕಾರ್ಟ್ ನ ಈ ಶರತ್ಕಾಲ ಚಳಿಗಾಲದ ಫ್ಯಾಶನ್ ಸಂಗ್ರಹದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳ ಉಡುಪುಗಳು, ಪಾದರಕ್ಷೆಗಳು ಮತ್ತು ಇನ್ನಿತರೆ ಪರಿಕರಗಳ ವ್ಯಾಪಕ ಶ್ರೇಣಿಯನ್ನು ಕಾಣಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next