Advertisement
ಗಿಡ್ಡ ಕೂದಲಿನವರು ಉದ್ದನೆಯ ಜಡೆ ಕಂಡು ಆಸೆ ಪಡುತ್ತಾರೆ. ಉದ್ದ ಕೂದಲುಳ್ಳವರು, ಬಾಬ್‌ಕಟ್ ಕಂಡು ಎಷ್ಟು ಆರಾಮಾಗಿದೆ ಎನ್ನುತ್ತಾರೆ. ಹುಡುಗಿಯರ ಕೂದಲಿನ ಕಥೆ ಇಷ್ಟೇ! ಕಷ್ಟಪಟ್ಟು ಬೆಳೆಸಿದ ಕೂದಲನ್ನು ಕತ್ತರಿಸಲು ಹಿಂದೆ – ಮುಂದೆ ನೋಡುವವರು ಒಂದು ಕಡೆಯಾದರೆ, ತಲೆ ಬಾಚಿಕೊಳ್ಳುವ ಕಿರಿಕಿರಿ ಬೇಡವೆಂದು ಕೂದಲನ್ನು ಗಿಡ್ಡ ಮಾಡಿಸಿಕೊಳ್ಳುವವರು ಇನ್ನೊಂದು ಕಡೆ. ಇಂಥ ತಾಪತ್ರಯವೇ ಬೇಡ ಎಂದೇ “ಮೆಸ್ಸಿ ಹೇರ್ ಸ್ಟೈಲ್’ ಶುರುವಾಗಿದ್ದು! ತಲೆ ಕೂದಲು ಉದ್ದವಿರಲಿ, ಗಿಡ್ಡವಿರಲಿ ಮೆಸ್ಸಿ ಹೇರ್ ಸ್ಟೈಲ್ ಎರಡಕ್ಕೂ ಸೈ.
ಏನಿದು ಮೆಸ್ಸಿ ಹೇರ್ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ತಲೆಗೂದಲು ಬಾಚಿಯೇ ಇಲ್ಲ ಅನ್ನುವ ಹಾಗೆ ಕಾಣುವಂತೆ ಮಾಡಿಕೊಳ್ಳುವ ಕೇಶಾಲಂಕಾರವೇ ಮೆಸ್ಸಿ ಹೇರ್! ವಿಚಿತ್ರವಾಗಿದ್ದರೂ ಇದು ನಿಜ. ತಲೆ ಕೂದಲನ್ನು ಅದರ ಪಾಡಿಗೆ ಬಿಟ್ಟು ಬಿಟ್ಟರೆ ಅದು ಸಿಕ್ಕು ಕಟ್ಟುತ್ತದೆ. ಆದ್ದರಿಂದಲೇ ತಲೆ ಬಾಚಿ, ಜಡೆ, ಜುಟ್ಟು ಅಥವಾ ತುರುಬು ಹಾಕಲಾಗುತ್ತದೆ. ಆದರೆ, ಕೈ ಬೆರಳುಗಳಿಂದಲೇ ಸಿಕ್ಕು ಬಿಡಿಸಿದಂತೆ ಮಾಡಿ ಜುಟ್ಟು ಹಾಕಿದರೆ ಅಥವಾ ತಲೆ ಕೂದಲನ್ನು ಹಾಗೇ ಬಿಟ್ಟರೆ ಅದೇ ಮೆಸ್ಸಿ ಹೇರ್ ಸ್ಟೈಲ್. ಕೂದಲಿನ ಆರೈಕೆ ಮಾಡಿ
ಕೈ ಬೆರಳುಗಳಿಂದ ಸಿಕ್ಕು ಬಿಡಿಸಿಕೊಳ್ಳುವುದರಿಂದ, ಸಾಫr… ಬ್ರಿಸಲ್ಸ್ ಇರುವ ಬ್ರಷ್ ಅಥವಾ ಮರದ ಬಾಚಣಿಗೆ ಬಳಸಿದರೆ ಸ್ಟಾಟಿಕ್ ಎಲೆಕ್ಟ್ರಿಸಿಟಿ (ಸ್ಥಿರ ವಿದ್ಯುತ್) ಉತ್ಪತ್ತಿ ಕಡಿಮೆಯಾಗುತ್ತದೆ. ಆಗ ತಲೆ ಕೂದಲು ಕರೆಂಟ್ ಶಾಕ್ ಹೊಡೆದಂತೆ ನಿಲ್ಲುವುದಿಲ್ಲ. ಬ್ಲೋ ಡ್ರೈಯರ್ ಮತ್ತು ಸ್ಟ್ರೇಟ್ನಿಂಗ್ ಐರನ್‌ನ ಬಳಕೆ ಕಡಿಮೆ ಮಾಡಿದಷ್ಟೂ ಒಳ್ಳೆಯದು.
ಪ್ರೋಟಿನ್ ಆಹಾರ ಸೇವನೆಯಿಂದ ತಲೆ ಕೂದಲಿಗೆ ಪೋಷಣೆ ಸಿಗುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ಆದ್ದರಿಂದ ತಲೆ ಕೂದಲಿನ ಕಾಳಜಿ ವಹಿಸುವವರು ಮುಖ್ಯವಾಗಿ ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು.
Related Articles
ಹೇರ್ ಸೀರಮ್, ಹೇರ್ ಜೆಲ್ ಮತ್ತು ಹೇರ್ ಸ್ಪ್ರೆàನಂಥ ಹೇರ್ ಕೇರ್ ಪ್ರಾಡಕr…ಗಳನ್ನು ಮಿತವಾಗಿ ಬಳಸಿ. ಇಲ್ಲವಾದರೆ ಇವುಗಳಿಂದ ತಲೆ ಹೊಟ್ಟಿನ ಸಮಸ್ಯೆ ಉಂಟಾಗುತ್ತದೆ. ಹೇರ್ ಕೇರ್ ಪ್ರಾಡಕr…ಗಳನ್ನು ಕೂದಲ ಮೇಲೆ ಬಳಸಬೇಕೇ ಹೊರತು, ಕೂದಲಿನ ಬುಡಕ್ಕಲ್ಲ. ತಲೆ ಕೂದಲು ಬೈಹುಲ್ಲಿನಂತೆ ಕಾಣದಿರಲು ಉತ್ತಮ ಶ್ಯಾಂಪೂ ಹಾಗು ಕಂಡಿಷನರ್ ಬಳಸುವುದು ಒಳಿತು.
Advertisement
ಈ ಟ್ರೆಂಡ್ ಶುರುವಾಗಿದ್ದು ಹೇಗೆ?ಹಲವು ಸಿನಿಮಾ ನಟಿಯರು ಇಂಥ ಹೇರ್ ಸ್ಟೈಲ್ ಮಾಡಿರುವುದನ್ನು ನೋಡಿರಬಹುದು. ಚಿತ್ರ ನಟಿಯರು ಬೆಳಗೆದ್ದು, ಮೇಕ್‌ಅಪ್ ಹಚ್ಚಿಕೊಳ್ಳದೆ, ತಲೆ ಬಾಚಿಕೊಳ್ಳದೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಹ್ಯಾಷ್ ಟ್ಯಾಗ್ ಮೆಸ್ಸಿ ಹೇರ್ ((#MESSIHAIR), ಮಿಸ್ ಬೆಡ್ ಹೆಡ್ (#MISSBEDHEAD) ಎಂದೆಲ್ಲ ಬರೆಯಲು ಶುರು ಮಾಡಿದ್ದೇ ತಡ, ಮಾಡೆಲ್‌ಗಳು, ಧಾರಾವಾಹಿ ನಟಿಯರು, ಅಭಿಮಾನಿಗಳು, ಫ್ಯಾಷನ್ ಪ್ರಿಯರು ಎಲ್ಲರೂ ತಮ್ಮ ತಮ್ಮ ಮೆಸ್ಸಿ ಹೇರ್ ಸೆಲ್ಫಿ ಅಪ್ಲೋಡ್ ಮಾಡಿದರು. ಹಾಗಾಗಿ ಈ ಲುಕ್ ಹೇರ್ ಸ್ಟೈಲೇ ಆಗಿಬಿಟ್ಟಿತು! ಹಾಲಿವುಡ್‌ನಲ್ಲಿ ಶುರುವಾದ ಅಲೆ, ಬಾಲಿವುಡ್, ಸ್ಯಾಂಡಲ್‌ವುಡ್ ಮತ್ತು ಇತರ ಚಿತ್ರರಂಗದಲ್ಲೆಲ್ಲ ಬೀಸಿ, ಜನರನ್ನೂ ಆವರಿಸಿದೆ. – ಅದಿತಿಮಾನಸ ಟಿ.ಎಸ್.