Advertisement

ಫಾರಿನ್‌ ಶೂಟಿಂಗ್‌ಗೆ ಸಾಥ್‌ ಕೊಡಲಿದೆ ‘ಫ್ಯಾಶನ್‌ ಎಬಿಸಿಡಿ’

12:57 PM Oct 03, 2021 | Team Udayavani |

ಸಿನಿಮಾಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸಬೇಕು, ಅದ್ಧೂರಿ ಲೊಕೇಶನ್‌ ತೋರಿಸಬೇಕು ಎಂಬ ಆಸೆ ಪ್ರತಿಯೊಬ್ಬ ಹೊಸ ನಿರ್ಮಾಪಕನದ್ದಾಗಿರುತ್ತದೆ. ಆದರೆ, ಸಹಜವಾಗಿಯೇ ವಿದೇಶದಲ್ಲಿ ಚಿತ್ರೀಕರಣ ಮಾಡುವಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ.

Advertisement

ಮುಖ್ಯವಾಗಿ ಸರಿಯಾದ ಮಾರ್ಗದರ್ಶನ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗುವ ಸಂಸ್ಥೆ ಬೇಕು. ಈಗ ಅದನ್ನೆಲ್ಲ ಕಾನೂನಿನ ಚೌಕಟ್ಟಿನಡಿ ನಿವಾರಿಸಿಕೊಡಲು ಫ್ಯಾಷನ್‌ ಎಬಿಸಿಡಿ ಎಂಬ ಸಂಸ್ಥೆ ಮುಂದೆ ಬಂದಿದೆ.

ಈ ಸಂಸ್ಥೆ ಬರೀ ಕಾನೂನು ತೊಡಕು ಮಾತ್ರವಲ್ಲದೇ ಎಲ್ಲ ವ್ಯವಸ್ಥೆಯನ್ನು ತಾನೇ ಮಾಡಿಕೊಡಲಿದೆ. ಯಾವುದೇ ತೊಂದರೆ ಇಲ್ಲದೆ ಸರಾಗವಾಗಿ ಚಿತ್ರೀಕರಣ ಮುಗಿಸಿಕೊಳ್ಳುವ ಅನುಕೂಲತೆಗಳನ್ನು ಕನ್ನಡ ಚಿತ್ರತಂಡಗಳಿಗೆ ಫ್ಯಾಷನ್‌ ಎಬಿಸಿಡಿ ಸಂಸ್ಥೆ ಮಾಡಿಕೊಡಲಿದೆಯಂತೆ. ಚರಣ್‌ ಸುವರ್ಣ ಅವರು ಈ ಫ್ಯಾಶನ್‌ ಎಬಿಸಿಡಿಯ ನೇತೃತ್ವ ವಹಿಸಿದ್ದಾರೆ.

ಇದು ಮಂಗಳೂರು ಮೂಲದ ಸಂಸ್ಥೆ. ಈ ಸಂಸ್ಥೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ನೊವೆಲ್‌ ವರ್ಕ್ಸ್ ಎಂಬ ಮತ್ತೂಂದು ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next