ಕಲಬುರಗಿ: ರೈತರ ಸುರಕ್ಷತೆಗಾಗಿ ಮತ್ತು ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪ್ರಧಾನ ಮಂತ್ರಿ ನರೇದ್ರ ಮೋದಿ 2016 ಜ.13 ರಂದು ಜಾರಿಗೊಳಿಸಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ವಿಜ್ಞಾನಿ ಡಾ| ಜಹೀರ ಅಹ್ಮದ್ ಹೇಳಿದರು.
ಭಾರತ ಸರಕಾರ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಜಿಪಂ, ತಾಪಂ, ಶಿಶು ಅಭಿವೃದ್ಧಿ ಯೋಜನೆ, ಕೃಷಿ ವಿಜ್ಞಾನ ಕೇಂದ್ರ , ಗ್ರಾಪಂ, ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಮೈಲಾರಲಿಂಗೇಶ್ವರ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಕರ ಕಚೇರಿಯ ಕೃಷಿ ಅಧಿಕಾರಿಗಳಾದ ಗುರುರಾಜ ಕುಲಕರ್ಣಿ ಮಾತನಾಡಿ, ರೈತರ ಮಣ್ಣಿನ ಆರೋಗ್ಯ ಪರೀಕ್ಷಿಸಿ ಮಣ್ಣಿನ ಆರೋಗ್ಯ ಕಾರ್ಡ್ ಪಡೆದು ಆ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬಹುದು ಎನ್ನುವದನ್ನು ತಿಳಿದು ಬಿತ್ತನೆ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಫಸಲನ್ನು ತೆಗೆಯಬಹುದು ಎಂದು ಹೇಳಿದರು.
ಬೆಳೆ ಹಾನಿ ಸಂದರ್ಭದಲ್ಲಿ ರೈತರಿಗೆ ವಿಮೆ ಮತ್ತು ಅಪಾಯದ ರಕ್ಷಣೆಯೊದಗಿಸಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಆನ್ ಲೈನ್ ಅರ್ಜಿ ಸಲ್ಲಿಸಿದ ರೈತರು ಇದರ ಪ್ರಯೋಜನ ಪಡೆಯಬಹುದು ಎಂದರು.
ಶಿಶು ಅಭಿವೃ ದ್ಧಿ ಯೋಜನಾ ಧಿಕಾರಿಗಳಾದ ಪ್ರವೀಣಕುಮಾರ ಮಾತನಾಡಿ, ನೈಸರ್ಗಿಕ ವಿಕೋಪಗಳ ಕೀಟ ಮತ್ತು ರೋಗಗಳ ಪರಿಣಾಮವಾಗಿ ಬೆಳೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಒಂದು ವೇಳೆ ವೈಫಲ್ಯ ಸಂಭವಿಸಿದರೆ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ಒದಗಿಸಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿದೆ ಎಂದು ಹೇಳಿದರು. ತಾಪಂ ಸದಸ್ಯೆ ವಿಠಾಬಾಯಿ ಶಿವಶರಣಪ್ಪ ಹಿರೇಗೌಡ ಉದ್ಘಾಟಿಸಿದರು. ದಸ್ತಯ್ಯ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಕೃಷಿ ಅಧಿಕಾರಿ ಕರಿಮ, ಪಟ್ಟಣ ಗ್ರಾಪಂ ಉಪಾಧ್ಯಕ್ಷ ಅರುಣಕುಮಾರ ಒಗೇರಿ, ಪಿಡಿಒ ವಿದ್ಯಾವಂತಿ, ಸರಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಚಾಂದಬಿ, ಹಿರಿಯ ಪ್ರಾಥಮಿಕ ಶಾಲೆಯ ಅಣ್ಣಯ್ಯ ಸಾಲಿಮಠ ,ಉರ್ದು ಶಾಲೆಯ ನಬಿ, ಎಸ್‌ಡಿ ಎಂಸಿ ಅಧ್ಯಕ್ಷ ಈಶ್ವರ ಬಿಸಗೂಂಡ, ಐಸಿಡಿಎಸ್ ಮೇಲ್ವಿಚಾರಕಿ ಶಿವಲೀಲಾ ಬಿ ಕಡಗಂಚಿ , ಮೈಲಾರಲಿಂಗೇಶ್ವರ ಶಿಕ್ಷಣಸಂಸ್ಥೆಯ ನಾಗರಾಜ ಖಂಡೂಜಿ ಹಾಜರಿದ್ದರು.
ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಭಾಷಣ, ನಿಬಂಧ, ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಸಹಾಯಕ ನಾಗಪ್ಪ ಅಂಬಾಗೋಳ ಸ್ವಾಗತಿಸಿ , ವಂದಿಸಿದರು.