ಉದ್ಯಮಿ ಬಿ.ಎಂ.ಫರೂಕ್ ಅತಿ ಹೆಚ್ಚು 767 ಕೋಟಿ ರೂ. ಮೊತ್ತದ ಆಸ್ತಿಪಾಸ್ತಿ ಹೊಂದಿದ್ದರೆ, ಬಿಜೆಪಿ ಅಭ್ಯರ್ಥಿ, ಉದ್ಯಮಿ ರಾಜೀವ್
ಚಂದ್ರಶೇಖರ್ 28 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಲ್ ಹನುಮಂತಯ್ಯ ಹಾಗೂ
ಜಿ.ಸಿ.ಚಂದ್ರಶೇಖರ ಬಳಿ ಸ್ವಂತ ಕಾರಿಲ್ಲ. ನಾಸಿರ್ ಹುಸೇನ್ ಬಳಿ ಇನೋವಾ ಕಾರು ಹಾಗೂ ಒಂದು ಹೊಂಡಾ ಆಕ್ಟೀವಾ ಸ್ಕೂಟಿ ಇದೆ. ಮೂವರೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಆಸ್ತಿವಿವರದಲ್ಲಿ ಈ
ವಿವರ ನೀಡಿದ್ದಾರೆ.
Advertisement
ಫರೂಕ್ ಆಸ್ತಿ 767 ಕೋಟಿ: ಜೆಡಿಎಸ್‌ನ ಬಿ. ಎಂ.ಫರೂಕ್ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ 767 ಕೋಟಿ ರೂ.ಗಿಂತ ಅಧಿಕ. ಎರಡು ವರ್ಷದ ಹಿಂದೆ ಅವರ ಆಸ್ತಿ 737 ಕೋಟಿ ರೂ. ಆಗಿತ್ತು. ಇದೀಗ 30 ಕೋಟಿ ರೂ. ಹೆಚ್ಚಳವಾಗಿದೆ. ಅವರ ವಾರ್ಷಿಕ ಆದಾಯ10.19 ಕೋಟಿ, ಪತ್ನಿಯ ವಾರ್ಷಿಕ ಆದಾಯ 59.9 ಲಕ್ಷ ರೂ. ಫರೂಕ್ ಅವರ ಚರಾಸ್ತಿ ಮೌಲ್ಯ 87.27 ಕೋಟಿ, ಸ್ಥಿರಾಸ್ತಿ ಮೌಲ್ಯ
591.33 ಕೋಟಿ ರೂ.
ಮಾಡೆಲ್‌ನ ಇಂಡಿಯನ್ ಸ್ಕೌಟ್ ಮೋಟಾರು ಬೈಕ್ ಬಿಟ್ಟರೆ ಅವರ ಬಳಿ ಯಾವುದೇ ವಾಹನಗಳಿಲ್ಲ. ಅವರ ಬಳಿ 27.98 ಕೊಟಿ, ಪತ್ನಿ ಬಳಿ 9.41 ಕೋಟಿ, ಮಕ್ಕಳ ಬಳಿ ಕ್ರಮವಾಗಿ 7.78 ಕೋಟಿ, ಹಾಗೂ 6.47 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಕೋರಮಂಗಲ 3ನೇ ಬ್ಲಾಕ್‌ನಲ್ಲಿ 9600 ಚದರ ಅಡಿಯ ಕೃಷಿಯೇತರ ಭೂಮಿ ಹೊಂದಿದ್ದಾರೆ. ಡಾ.ಎಲ್. ಹನುಮಂತಯ್ಯ: ಇವರ ಚರಾಸ್ತಿ ಮೌಲ್ಯ 1.24 ಕೋಟಿ ರೂ. ಸ್ವಂತ ವಾಹನ ಇಲ್ಲ, ಬಂಗಾರದ ಆಭರಣ ಇಲ್ಲ. ದೊಡ್ಡಬಳ್ಳಾಪುರ ರಾಮೇಶ್ವರ ಹಳ್ಳಿಯಲ್ಲಿ 4.10 ಎಕರೆ ಜಮೀನು, ಭೂಪಸಂದ್ರದಲ್ಲಿ ಒಂದು ಹಾಗೂ ನಂದಿನಿ ಲೇಔಟ್‌ನಲ್ಲಿ 2 ಸೈಟ್ ಇದ್ದು, ಇವುಗಳ ಮಾರುಕಟ್ಟೆ ಮೌಲ್ಯ 3.48 ಕೋಟಿ.
Related Articles
Advertisement
ನಾಸೀರ್ ಹುಸೇನ್: ಚರಾಸ್ತಿ ಮೌಲ್ಯ 18.28 ಕೋಟಿ ರೂ. ಸ್ತಿರಾಸ್ತಿ ಮೌಲ್ಯ 1.12 ಕೋಟಿ. (1.4 ಎಕರೆ ಜಮೀನು, ಕೊಳಗಾಲು ಗ್ರಾಮ, ಬೆಂಗಳೂರು ಸಾರಿಗೆ ನಗರದಲ್ಲಿ ಸೈಟ್, ಚಿತ್ರದುರ್ಗದಲ್ಲಿ ವಾಣಿಜ್ಯ ಕಟ್ಟಡ, ಬಳ್ಳಾರಿಯಲ್ಲಿ ಸ್ವಂತ ಮನೆ). ಪತ್ನಿ ಮೆಹನಾಝ್ ಅನ್ಸಾರಿ ಬಳಿ 42.41 ಲಕ್ಷ ರೂ. ಮೌಲ್ಯದ ಆಸ್ತಿಯಿದೆ. ಇವರಿಗೆ ಇರುವ ಒಟ್ಟು ಸಾಲ 5.77 ಲಕ್ಷ ರೂ.