Advertisement

ಕಾಶ್ಮೀರಿ ಪಂಡಿತರ ವಲಸೆ; ಒಂದು ವೇಳೆ ನಾನೇ ತಪ್ಪಿತಸ್ಥನಾದರೆ ಗಲ್ಲಿಗೇರಿಸಿ: ಫಾರೂಖ್ ಸಂದರ್ಶನ

12:48 PM Mar 22, 2022 | Team Udayavani |

ನವದೆಹಲಿ: ಬಾಲಿವುಡ್ ನ ದ ಕಾಶ್ಮೀರ್ ಫೈಲ್ಸ್ ಸಿನಿಮಾ ತೆರೆಕಂಡ ಬಳಿಕ ಜಮ್ಮು-ಕಾಶ್ಮೀರದಿಂದ ಕಾಶ್ಮೀರಿ ಪಂಡಿತರು ಸಾಮೂಹಿಕವಾಗಿ ವಲಸೆ ಹೋಗಿರುವ ವಿಚಾರ ಈಗ ರಾಜಕೀಯ ವಲಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಒಂದು ವೇಳೆ ಕಾಶ್ಮೀರಿ ಪಂಡಿತರ ವಲಸೆಗೆ ನಾನೇ ಹೊಣೆಗಾರ ಎಂದು ಸಾಬೀತಾದರೆ ನನ್ನ ಗಲ್ಲಿಗೇರಿಸಿ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇದನ್ನೂ ಓದಿ:ಬಡ ಯುವತಿಯ ಮದುವೆಗೆ ನೆರವಾದ ಮಂಗಳಮುಖಿಯರು

“ನೀವು ಪ್ರಾಮಾಣಿಕ ನ್ಯಾಯಾಧೀಶರೋ ಅಥವಾ ಸಮಿತಿಯನ್ನು ನೇಮಕ ಮಾಡಿದರೆ ಆಗ ಯಾರು ಹೊಣೆಗಾರರು ಎಂಬ ಸತ್ಯ ಬೆಳಕಿಗೆ ಬರುತ್ತದೆ. ಒಂದು ವೇಳೆ ಫಾರೂಖ್ ಅಬ್ದುಲ್ಲಾ ಹೊಣೆ ಎಂದಾದರೆ, ದೇಶದ ಯಾವುದೇ ಭಾಗದಲ್ಲೂ ನೇಣಿಗೇರಲು ಸಿದ್ದನಾಗಿದ್ದೇನೆ. ನಾನು ವಿಚಾರಣೆಯನ್ನು ಎದುರಿಸಲು ಸಿದ್ದನಿದ್ದೇನೆ. ಆದರೆ ಹೊಣೆಗಾರರಲ್ಲದ ಜನರನ್ನು ದೂಷಿಸಬೇಡಿ” ಎಂದು ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತರ ವಲಸೆಗೆ ನಾನು ಹೊಣೆಗಾರನಲ್ಲ ಎಂದು ಭಾವಿಸುತ್ತೇನೆ. ಒಂದು ವೇಳೆ ಈ ಕಹಿ ಸತ್ಯವನ್ನು ಜನರು ತಿಳಿದುಕೊಳ್ಳಬೇಕಾದರೆ ಅಂದಿನ ಗುಪ್ತಚರ ಇಲಾಖೆ ಮುಖ್ಯಸ್ಥರೊಂದಿಗೆ ಅಥವಾ ಅಂದು ಕೇಂದ್ರ ಸಚಿವರಾಗಿದ್ದ ಕೇರಳದ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಅವರ ಜೊತೆ ಮಾತನಾಡಬೇಕು ಎಂದು ಫಾರೂಖ್ ಸಂದರ್ಶನದಲ್ಲಿ ಹೇಳಿದ್ದಾರೆ.

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರಿಗೆ ಮಾತ್ರವಲ್ಲ, ಸಿಖ್ ಮತ್ತು ಮುಸ್ಲಿಮ್ ಸಮುದಾಯಕ್ಕೆ ಏನಾಯಿತು ಎಂಬ ಸತ್ಯ ಹೊರಬರಲು ಆಯೋಗವನ್ನು ರಚಿಸಬೇಕು. ಅಂದು ನನ್ನ ಶಾಸಕರು, ಪಕ್ಷದ ಕಾರ್ಯಕರ್ತರು ಹಾಗೂ ನನ್ನ ಸಚಿವರುಗಳು ತಮ್ಮ ಆಹಾರವನ್ನು ಮರದ ಮೇಲಿನಿಂದ ತೆಗೆದುಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದ್ದಾರೆ.

Advertisement

ವಿವೇಕ್ ಅಗ್ನಿಹೋತ್ರಿ ಅವರ ದ ಕಾಶ್ಮೀರ್ ಫೈಲ್ಸ್ ಪ್ರಚಾರತಂತ್ರದ ಸಿನಿಮಾವಾಗಿದೆ ಎಂದು ಫಾರೂಖ್ ಅಬ್ದುಲ್ಲಾ ಆರೋಪಿಸಿದ್ದಾರೆ. ಅಂದು ಕಾಶ್ಮೀರದಲ್ಲಿ ನಡೆದ ಘಟನೆ ಬಗ್ಗೆ ಇಂದಿಗೂ ನನ್ನ ಹೃದಯ ಮಿಡಿಯುತ್ತಿದೆ ಎಂದು ಫಾರೂಖ್ ಅಬ್ದುಲ್ಲಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next