Advertisement
2017-18, 2018-19ನೇ ಸಾಲಿನ ಬೆಳೆ ವಿಮೆ ವಂಚಿತ ಬಸರಕೋಡ, ಕೋಳೂರ, ತಂಗಡಗಿ, ಯರಝರಿ, ಕುಂಟೋಜಿ, ತಾರನಾಳ ಭಾಗದ ಸಾವಿರಕ್ಕೂ ಹೆಚ್ಚು ರೈತರು ಇಲ್ಲಿನ ಮಿನಿ ವಿಧಾನಸೌಧ ಎದುರು ಸೋಮವಾರದಿಂದ ಪ್ರಾರಂಭಿಸಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Related Articles
Advertisement
ವಿಮಾ ಕಂಪನಿಯ ವಿಭಾಗೀಯ ವ್ಯವಸ್ಥಾಪಕ ಪೋಳ ಮಾತನಾಡಲು ಮುಂದಾದಾಗ ರೈತರು ಗೊಂದಲ ಎಬ್ಬಿಸಿದರು. ವಿಮೆ ಏಕೆ ಬಂದಿಲ್ಲ ಅನ್ನೋದಕ್ಕೆ ಸ್ಪಷ್ಟ ಕಾರಣ ತಿಳಿಸುವಂತೆ ಒತ್ತಡ ಹೇರಿದರು. ಇದರಿಂದ ಧರಣಿ ಟೆಂಟ್‌ನಲ್ಲಿ ಗೊಂದಲ ಸೃಷ್ಟಿಯಾಗಿ ಸ್ಪಷ್ಟ ಉತ್ತರ ದೊರಕಲಿಲ್ಲ.
ಈ ಹಿಂದೆ 2-3 ಬಾರಿ ಇದೇ ವಿಷಯಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಸಿದ್ದಾಗ ಸೆ. 9ರಂದು ವಿಮೆ ಕಂಪನಿ ಅಧಿಕಾರಿಗಳು ಇಲ್ಲಿಗೆ ವಿವರಣೆ ನೀಡಲಿದ್ದಾರೆ ಎಂದು ತಹಶೀಲ್ದಾರ್ ವಿನಯ್‌ಕುಮಾರ ಪಾಟೀಲ ಭರವಸೆ ನೀಡಿದ್ದರು. ಹೀಗಾಗಿ ಆಗೆಲ್ಲ ರೈತರು ಪ್ರತಿಭಟನೆ ಕೈ ಬಿಟ್ಟಿದ್ದರು. ಆದರೆ ಸೋಮವಾರ ವಿಮೆ ಕಂಪನಿ ಪ್ರತಿನಿಧಿ ಧರಣಿ ಟೆಂಟ್‌ಗೆ ಬಂದರೂ ರೈತರಿಗೆ ಸೂಕ್ತ ಕಾರಣ ಒದಗಿಸುವಲ್ಲಿ, ಸಮಸ್ಯೆ ಬಗೆಹರಿಸಿ ವಿಮೆ ಹಣ ದೊರಕಿಸಿಕೊಡುವಲ್ಲಿ ವಿಫಲರಾದರು. ಇದರಿಂದ ಆಕ್ರೋಶಗೊಂಡ ರೈತರು ತಮ್ಮೊಂದಿಗೆ ಮಾತುಕತೆಗೆ ಬಂದಿದ್ದ ಕೃಷಿ ಅಧಿಕಾರಿಗಳಿಗೆ, ವಿಮೆ ಕಂಪನಿ ಪ್ರತಿನಿಧಿಗೆ ಘೇರಾವ್ ಹಾಕಿ ಟೆಂಟ್ನಿಂದ ಕದಲದಂತೆ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಪಿಐ ರವಿಕುಮಾರ ಕಪ್ಪತ್ತನ್ನವರ್, ತಹಶೀಲ್ದಾರ್ ಅವರು ಇವರನ್ನು ಬಚಾವ್ ಮಾಡಿ, ರೈತರ ಮನವೊಲಿಸಿ ಸೂಕ್ತ ಉತ್ತರ ದೊರಕಿಸಿಕೊಡಲು ಕಾಲಾವಕಾಶ ಪಡೆದುಕೊಂಡರು.
ರೈತ ಸಂಘದ ಸಂಗಣ್ಣ ಬಾಗೇವಾಡಿ, ಅಯ್ಯಪ್ಪ ಕೋಳೂರ, ವೈ.ಎಲ್. ಬಿರಾದಾರ, ಹುಲಗಪ್ಪಗೌಡ ಬಿರಾದಾರ, ಲಕ್ಷ್ಮಣಗೌಡ ಬಿರಾದಾರ, ಶಿವಬಸಪ್ಪ ಪೂಜಾರಿ, ಬಸವರಾಜ ಕೋಳೂರ, ಶಾಂತಪ್ಪ ಮಾನೇಕರ, ರಾಮಣ್ಣ ಮಾದಿನಾಳ, ಶಾರದಾ ಕಾಳಣ್ಣವರ, ಸಂಗಮ್ಮ ಹಿರೇಮಠ, ಗುರುಬಾಯಿ ಬಿರಾದಾರ, ಸೋಮವ್ವ ಬಿರಾದಾರ, ಬಸರಕೋಡ ಭಾಗದ ರೈತ ಮುಖಂಡರಾದ ನಾಗರಾಜ ತಂಗಡಗಿ, ಬಾಪುಗೌಡ ಬಿರಾದಾರ, ಕೆ.ಎಸ್. ಕೊಟಗಿ, ವೀರೇಶ ಮಂಕಣಿ, ಶಾಂತಗೌಡ ಮೇಟಿ, ಮಲ್ಲಣ್ಣ ಮೇಟಿ, ಕರಬಸಯ್ಯ ಹಿರೇಮಠ, ರಾಚಪ್ಪ ಕೋವಣ್ಣವರ, ಗೌಡಪ್ಪಗೌಡ ಪಾಟೀಲ, ಆನಂದ ಬಿರಾದಾರ ಸೇರಿದಂತೆ ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು. ಇವರಿಗೆಲ್ಲ ಬಸರಕೋಡ ಭಾಗದ ರೈತ ಮುಖಂಡರು ಸ್ಥಳದಲ್ಲೇ ಅಡುಗೆ ತಯಾರಿಸಿ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿದ್ದರು.