Advertisement

ರೈತರ ಕಣ್ಣೀರು ಒರೆಸುವ ಕೆಲಸ ಮಾಡುವೆ

11:32 PM Feb 14, 2020 | Team Udayavani |

ಹಾವೇರಿ: ರೈತರ ಸಮಸ್ಯೆ, ಬೇಡಿಕೆಗೆ ಸ್ಪಂದಿಸು ತ್ತೇನೆ. ರೈತರ ಕಣ್ಣೀರು ಒರೆಸುವ ಕಾರ್ಯ ಮಾಡು ತ್ತೇನೆ. ಕಿಸಾನ್‌ ಸಮ್ಮಾನ್‌ ಯೋಜನೆ ಯಲ್ಲಿ ಬಿಟ್ಟು ಹೋದ ಒಂದೂವರೆ ಲಕ್ಷ ರೈತರ ಹೆಸರನ್ನು 10 ದಿನಗಳಲ್ಲಿ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ಶುಕ್ರವಾರ ಸ್ವಕ್ಷೇತ್ರ ಹಿರೇಕೆರೂರಿಗೆ ಹೋಗುವ ಮಾರ್ಗದಲ್ಲಿ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಕ್ರಾಸ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಮೊದಲು ಅರಣ್ಯ ಇಲಾಖೆ ಕೊಟ್ಟಿದ್ದರು. ಆದರೆ, ನನಗೆ ಜನರು ಇರೋ ಕಡೆ ಕೊಡಿ. ಪ್ರಾಣಿ ಇರೋ ಕಡೆ ಕಳುಹಿಸಬೇಡಿ ಎಂದು ಮನವಿ ಮಾಡಿದ್ದೆ. ಹೀಗಾಗಿ, ನನಗೆ ಕೃಷಿ ಖಾತೆ ಕೊಟ್ಟಿದ್ದಾರೆ. ಕೃಷಿ ಇಲಾಖೆ ಬಹಳ ದೊಡ್ಡ ಖಾತೆ.

ಕೃಷಿ ಇಲಾಖೆ ನೀಡಿರುವುದು ತುಂಬ ಖುಷಿಯಾಗಿದೆ. ಕೊಟ್ಟ ಜವಾ ಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸು ತ್ತೇನೆ ಎಂದರು. ಕೃಷಿಕರ ಬೇಡಿಕೆ ಈಡೇರಿಸಲು ಹಾಗೂ ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಬರುವ ಆಯವ್ಯಯದಲ್ಲಿ ರೈತರಿಗೆ ವಿಶೇಷ ಕೊಡುಗೆ ಕೊಡುವ ನಿರೀಕ್ಷೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next