Advertisement

ಶಿವಮೊಗ್ಗ : ಬೆಲೆ ಸಿಗದ ಕಾರಣ ಬೆಳೆಯನ್ನು ನಾಶ ಮಾಡಿದ ರೈತರು

01:52 PM May 27, 2021 | Girisha |

ಶಿವಮೊಗ್ಗ:  ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ ಅನ್ನದಾತರು ಬೆಳೆದಿರುವ ಬೆಲೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಅದನ್ನ ನಾಶ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

Advertisement

ಡೆಡ್ಲಿ ವೈರಸ್​​ನಿಂದ ಹೊರಬರಲು ರಾಜಾದ್ಯಂತ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಕೆಲವರ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ರೈತರು ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ.

ಕಲ್ಲಂಗಡಿ ಬೆಳೆ ನಾಶ ಮಾಡಿದ ರೈತರು

ಹೌದು,​ ನಾಡಿನ ಜನತೆಗೆ ಬೆಳಕು ನೀಡಿದ ಶರಾವತಿ ಹಿನ್ನೀರಿನ ರೈತರ ಗೋಳು ಹೇಳ ತೀರದಾಗಿದೆ. ಶರಾವತಿ ಹಿನ್ನೀರಿನ ಪ್ರದೇಶಗಳಾದ ಕರೂರು, ಬ್ಯಾಕೋಡು‌ ಭಾಗದ ರೈತರು ಕಲ್ಲಂಗಡಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ತಾವು ಬೆಳೆದಿರುವ ಬೆಳೆ ಖುದ್ದಾಗಿ ನಾಶ ಮಾಡುತ್ತಿದ್ದಾರೆ.

ಈ ಭಾಗದಲಿ ಹತ್ತಾರು ರೈತರು‌ ತಮ್ಮ ಜಮೀನುಗಳಲ್ಲಿ ಕಲ್ಲಂಗಡಿ ಬೆಳೆದಿದ್ದರು.‌ ಆದರೆ ಲಾಕ್​ಡೌನ್​ ಕಾರಣ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ತಮಗೆ ಸೂಕ್ತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next