Advertisement

ಗರಿಗೆದರಿದ ಕೃಷಿ ಚಟುವಟಿಕೆ

06:04 PM Apr 14, 2020 | mahesh |

ಚಿಕ್ಕಮಗಳೂರು: ಕೋವಿಡ್-19 ಭೀತಿಯ ನಡುವೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದೆರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಶುಂಠಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಭೂಮಿ ಹದ ಮಾಡಿರುವ ರೈತರು ಶುಂಠಿ ಬಿತ್ತನೆಗೆ ಪಟ್ಟೆಗಳನ್ನು ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಳೆ ಬಂದು ಭೂಮಿ ಇನ್ನಷ್ಟು ಹದಗೊಂಡರೆ ಶುಂಠಿ ಬಿತ್ತನೆ ಕಾರ್ಯಕ್ಕೆ ತೊಂದರೆಯಾಗಲಿದೆ ಎಂದು ಅರಿತ ರೈತಾಪಿ ವರ್ಗ, ಪಾತಿ ಮಾಡಲು ಮುಂದಾಗಿದ್ದಾರೆ.

Advertisement

ಕಳೆದ ವರ್ಷ ಶುಂಠಿ ಬೆಳೆಗೆ ಉತ್ತಮ ಧಾರಣೆ ದೊರೆತ ಹಿನ್ನೆಲೆಯಲ್ಲಿ ಈ ವರ್ಷ ಹಲವು ರೈತರು ಶುಂಠಿ ಬೆಳೆಯಲು ಮುಂದಾಗಿದ್ದಾರೆ. ಕೆಲ ರೈತರು ತಮ್ಮ ಜಮೀನಿನಲ್ಲಿ ಶುಂಠಿ ಬೆಳೆದಿದ್ದರೆ ಮತ್ತೆ ಕೆಲವರು ಜಮೀನು ಗುತ್ತಿಗೆ ಪಡೆದು ಬೆಳೆ ಬೆಳೆಯಲು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ವಿಧಿ ಸಲಾಗಿದೆ. ಸರ್ಕಾರ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಕೃಷಿ ಚಟುವಟಿಕೆಯಲ್ಲಿ ಮಗ್ನಾರಾಗಿದ್ದು, ಸರ್ಕಾರ ಕೃಷಿ ಚಟುವಟಿಕೆ ನಡೆಸಲು ಲಾಕ್‌ಡೌನ್‌ ನಿಂದ ವಿನಾಯಿತಿ ನೀಡಿರುವ ಮಾಹಿತಿ ಅರಿಯದ ರೈತರು ಪೊಲೀಸರ ಭಯದಲ್ಲೇ ಕೃಷಿ ಚಟುವಟಿಕೆಗೆ ಮುಂದಾಗುತ್ತಿದ್ದಾರೆ. ಕೊರೊನಾ ಸೋಂಕು ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಕೃಷಿ ಚಟುವಟಿಕೆಯಲ್ಲಿ
ನಿರತರಾಗಿರುವ ಕೃಷಿ ಕಾರ್ಮಿಕರು ಈ ರೋಗ ತೊಲಗಿದರೆ ಸಾಕು. ಈ ಲಾಕ್‌ಡೌನ್‌ ತೆರವುಗೊಳಿಸಿದರೆ ಸಾಕು. ಯಾವಾಗ ಇದೆಲ್ಲ ಮುಗಿಯುತ್ತೋ ಎಂಬ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ರೈತರನ್ನು ಕಾಡುತ್ತಿದೆ.

ಹೆಚ್ಚಿನ ರೈತರು ಶುಂಠಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ನಾನು ಕೂಡ ಎರಡು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯುತ್ತಿದ್ದೇನೆ. 15 ಚೀಲ ಶುಂಠಿ ಬೇಕಾಗುತ್ತದೆ. ಬೆಳೆ ಉತ್ತಮವಾಗಿ ಬಂದರೆ 250 ರಿಂದ 300 ಚೀಲ ಶುಂಠಿ ಬರುತ್ತದೆ. ಈ ಬಾರಿ ಉತ್ತಮ ಧಾರಣೆ ಸಿಗುವುದು ಅನುಮಾನ. ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದೆವು. ಎಲ್ಲಾ ಖರ್ಚು ಕಳೆದು ಏನೂ ಉಳಿಯುತ್ತಿರಲ್ಲಿಲ್ಲ. ಆದ್ದರಿಂದ ಶುಂಠಿ ಬೆಳೆಯಲು ಮುಂದಾಗಿದ್ದೇವೆ.
ಹರೀಶ್‌, ರೈತ, ಬಾಚಿಗನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next