ನಿಯಂತ್ರಣಕ್ಕೆ ಕಸರತ್ತು:
ಸತತ ಬರಗಾಲದಿಂದ ತತ್ತರಿಸಿರುವ ರೈತರಿಗೆ ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಾಗಿಗೆ. ಹೀಗಾಗಿ, ಕೆಲ ರೈತರು ಬೆಳೆಗಳ ರಕ್ಷಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದಾರೆ. ಕೆಲವರು ಜಮೀನಿನ ಸುತ್ತ ಬೇಲಿ ಹಾಕಿ, ಜಮೀನಿನಲ್ಲೇ ಒಂದು ಗುಡಿಸಲು ನಿರ್ಮಿಸಿಕೊಂಡು ಜಿಂಕೆಗಳನ್ನು ಓಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಜಿಂಕೆಗಳನ್ನು ಹೆದರಿಸಲು ನಾನಾ ವಸ್ತುಗಳನ್ನೂ ಬಳಸುತ್ತಾ ರೈತರು ನಿದ್ದೆ ಮರೆತಿದ್ದಾರೆ. ಜಿಂಕೆಗಳನ್ನು ಕಾಯುವುದೇ ನಿತ್ಯ ಕಾಯಕವಾಗಿದೆ.
ನಿರಂತರ ಹೋರಾಟ:
ತಾಲೂಕಿನ ಯರೇಹಂಚಿನಾಳ, ಬಿನ್ನಾಳ, ಸಿದ್ನೆಕೊಪ್ಪ, ಸೋಂಪುರ, ಚಿಕ್ಕೇನಕೊಪ್ಪ, ಭಟ್ಟಪನಹಳ್ಳಿ, ಮಂಡಲಗೇರಿ, ಮಸಬಹಂಚಿನಾಳ, ಬೆಣಕಲ್, ಕುಕನೂರು, ದ್ಯಾಂಪುರ, ರಾಜೂರು, ಸಂಗನಹಾಳ, ತೊಂಡಿಹಾಳ, ಬಂಡಿಹಾಳ, ಕರಮುಡಿ ಹಾಗೂ ಇನ್ನಿತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಪ್ರಕಾರ ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಸುಮಾರು 20,572 ಕೃಷ್ಣಮೃಗ, 16,420 ಜಿಂಕಾರ, 10,856 ಲಾಂಗಚಾಪರ ಎಂಬ ಮೂರು ಪ್ರಜಾತಿಯ ಜಿಂಕೆಗಳಿವೆ.
ಜಿಂಕೆ ವನದ ಬದಲು ಪರ್ಯಾಯ ಆಗಲಿಲ್ಲ:
ಜಿಂಕೆ ವನದ ಬದಲು ಪರ್ಯಾಯವಾಗಿ ಹೊಸ ಯೋಜನೆ ರೂಪಿಸಿದ್ದರು. ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಮಧ್ಯ ಹಳ್ಳದ ದಂಡೆಯಲ್ಲಿ ಜಿಂಕೆಗಳಿಗೆ ಆಹಾರ ಬೆಳೆಯುವುದು ಹಾಗೂ ಹಳ್ಳದಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೋಳ್ಳುವುದಕ್ಕೆ ಪ್ರಸ್ತಾವನೆ ಸಿದ್ಧಪಡಿಸಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅದಕ್ಕೆ ಸಬೂಬು ಎನ್ನುವಂತೆ ಜಿಂಕೆಗಳು ಅಂಜುಬುರಕ ಪ್ರಾಣಿ. ಬೇಸಿಗೆಯಲ್ಲಿ ಬಿಸಿಲು ತಡೆದುಕೊಳ್ಳಲು ಆಗುವುದಿಲ್ಲ. ಒಂದು ಬಾರಿ ಮನುಷ್ಯರನ್ನು ಕಂಡರೆ 15 ದಿನಗಳವರೆಗೆ ಆ ಭಾಗಕ್ಕೆ ಹೋಗುವುದಿಲ್ಲ. ಆದ್ದರಿಂದ ಹಳ್ಳದ ದಂಡೆ ಮೇಲೆ ಆಹಾರ, ಕುಡಿಯಲು ನೀರು ಸಿಕ್ಕರೆ ರೈತರ ಜಮೀನುಗಳಿಗೆ ನುಗ್ಗುವುದು ತಪ್ಪುತ್ತದೆ ಎನ್ನುತ್ತಿದ್ದಾರೆ.
Advertisement
ಸುಮಾರು ವರ್ಷಗಳಿಂದ ಜಿಂಕೆವನ ನಿರ್ಮಿಸುವಂತೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಎಲ್ಲ ಸರಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ. ಇನ್ನಾದರೂ ರೈತರ ಗೋಳಾಟ ಅಂತ್ಯವಾಗುತ್ತದೆ ಎಂಬುವ ನಂಬಿಕೆ ನನ್ನದು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಾಗಿದೆ.•ಅಂದಪ್ಪ ಕೊಳೂರು ರೈತ ಸಂಘದ ಜಿಲ್ಲಾಧ್ಯಕ್ಷ
Related Articles
Advertisement