Advertisement

ರೈತರ ಹೋರಾಟ ಪ್ರತಿಷ್ಠೆ ಆಗದಿರಲಿ; ಪ್ರಧಾನಿ ಮೋದಿ ಇಂಟಲಿಜೆಂಟ್ ಶಾರ್ಪ್ ಮ್ಯಾನ್: ದೇವೇಗೌಡ

11:41 AM Feb 10, 2021 | Team Udayavani |

ರಾಯಚೂರು: ದೆಹಲಿಯಲ್ಲಿ ಮೂರು ತಿಂಗಳಿಂದ ರೈತರು ನಡೆಸುತ್ತಿರುವ ಹೋರಾಟ ಪ್ರತಿಷ್ಠೆ ಆಗಬಾರದು. ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

Advertisement

ನಗರದ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ತಮ್ಮ ಸಮಸ್ಯೆ ಹೇಳಿಕೊಳ್ಳುವ ಹಕ್ಕಿದೆ. ಮೂರು ತಿಂಗಳಿಂದ ಕೊರೆವ ಚಳಿ ಲೆಕ್ಕಿಸದೆ ಹೋರಾಟ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಹಳ ಚೆನ್ನಾಗಿ ಮಾತನಾಡಿದ್ದಾರೆ.  ಆದರೆ, ಹೋರಾಟ ಹೇಗೆ ಅಂತ್ಯ ಮಾಡಬೇಕು ಎಂಬ ತಾರ್ಕಿಕ ಅಂತ್ಯವನ್ನು ತಿಳಿಸಿಲ್ಲ ಎಂದರು.

‘ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆಗೆ ಯಾರು ಕಾರಣ ಎಂಬುದು ತನಿಖೆ ನಡೆದಿದೆ. ಖಲೀಸ್ತಾನ, ವಿದೇಶಿ ಹಣ ಬಂದಿತ್ತು ಎನ್ನುವ ಊಹಾಪೋಹಕ್ಕೆ‌ ನಾನು ಉತ್ತರ ಕೊಡುವುದಿಲ್ಲ. ಗೃಹ ಸಚಿವಾಲಯ ಈ ಬಗ್ಗೆ ತನಿಖೆ ಮಾಡುತ್ತಿದ್ದು, ಅದರ ವರದಿ ಆಧರಿಸಿ ಮತ್ತೆ ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ:   ಉತ್ತರಪ್ರದೇಶ: ಲಿಕ್ಕರ್ ಮಾಫಿಯಾ ಗೂಂಡಾಗಳಿಂದ ಕಾನ್ಸ್ ಟೇಬಲ್ ಹತ್ಯೆ, ಎಸ್ ಐ ಗಂಭೀರ

ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕುರಿತು ಸಿದ್ದರಾಮಯ್ಯ ಅವರೇ ಉತ್ತರಿಸಬೇಕು. ಹಿಂದೆ ಯಾವ ಜಾತಿಗೆ ಎಷ್ಟು ಮೀಸಲಾತಿ ನೀಡಬೇಕು ಎನ್ನುವ ಸಮಿತಿಯಲ್ಲಿ ಅವರೇ ಇದ್ದರು ಎಂದರು.

Advertisement

ಪ್ರಧಾನಿ ಮೋದಿ ಹೊಗಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿಯವರಿಗೆ ನನ್ನ ಬಗ್ಗೆ ಎಲ್ಲ ತಿಳಿದಿದೆ. ನನ್ನ ಹಿನ್ನೆಲೆ ಬೆಳೆದು ಬಂದ ದಾರಿ ಹೋರಾಟದ ಜೀವನ ಗೊತ್ತಾಗಿದೆ. ಅವರು ಇಂಟಲಿಜೆಂಟ್ ಶಾರ್ಪ್ ಮ್ಯಾನ್ ಎಂದು ಹೊಗಳಿದರು.

ಇದನ್ನೂ ಓದಿ:  ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದ 500 ಖಾತೆಗಳನ್ನು ಅಮಾನತುಗೊಳಿಸಿದ ಟ್ವೀಟರ್

Advertisement

Udayavani is now on Telegram. Click here to join our channel and stay updated with the latest news.

Next