Advertisement
ಮಹದಾಯಿ ಯೋಜನೆ ಜಾರಿಗಾಗಿಯೇ ವೀರೇಶ ಸೊಬರದಮಠ ಅವರು ಸನ್ಯಾಸ ದೀಕ್ಷೆ ಸ್ವೀಕರಿಸಿದರೂ ಸರಕಾರಗಳು, ಜನಪ್ರತಿನಿಧಿಗಳು ಕಣ್ಣು ತೆರೆಯುತ್ತಿಲ್ಲ. ಇವರ ಧೋರಣೆಯಿಂದಾಗಿ ಸೊಬರದಮಠ ಇಂದಿನಿಂದ (ಜು.16) ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಉಪವಾಸ ಸತ್ಯಾಗ್ರಹದ ವೇಳೆ ಸೊಬರದಮಠ ಅವರು ಅಸುನೀಗಿದರೆ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ಈ ಭಾಗದ ಜನಪ್ರತಿನಿಧಿಗಳೇ ಹೊಣೆಗಾರರಾಗುತ್ತಾರೆ. ಆದ್ದರಿಂದ ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಜೋಶಿ ಅವರು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಕೂಡಲೇ ಯೋಜನೆ ಜಾರಿಗೊಳಿಸಲು ಸರ್ವಪ್ರಯತ್ನ ಮಾಡಲಾಗುವುದೆಂದು ಭರವಸೆ ಕೊಟ್ಟು ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವರಿಕೆ ಮಾಡಬೇಕು.
ಅನಾಹುತ ಸಂಭವಿಸುವ ಮೊದಲು ನಾವೆಲ್ಲ ಸೊಬರದಮಠ ಅವರನ್ನು ಉಳಿಸಿಕೊಳ್ಳಬೇಕಾಗಿದೆ. ಈ ವಿಷಯದಲ್ಲಿ ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ಪ್ರಧಾನಿ ಒಳ್ಳೆಯರಿದ್ದಾರೆ. ಆದರೆ ಅವರಿಗೆ ಈ ಭಾಗದ ಸಂಸದರು ಮಹದಾಯಿ ವಿಷಯವಾಗಿ ಸರಿಯಾಗಿ ಮನವರಿಕೆ ಮಾಡಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಮಹದಾಯಿ ಸಮಸ್ಯೆ ಈಡೇರಿಸಿದರೆ ಪ್ರಧಾನಿ ಅವರನ್ನು ಪೂಜಿಸಲಾಗುವುದು ಎಂದರು.
ಬೆಂಬಲ-ಸಹಕಾರದ ಭರವಸೆ: ಸ್ಥಳಕ್ಕಾಗಮಿಸಿದ ಮಹೇಶ ಟೆಂಗಿನಕಾಯಿ ಮಾತನಾಡಿ, ಜಗದೀಶ ಶೆಟ್ಟರ ಹಾಗೂ ಜೋಶಿ ಅವರಿಗೆ ನಿಮ್ಮ ಹೋರಾಟದ ಬಗ್ಗೆ ಮನವರಿಕೆ ಮಾಡಲಾಗುವುದು. ನೀವು ಹೋರಾಟ ಮಾಡುತ್ತಿರುವುದು ರೈತರಿಗಾಗಿ ಮಾತ್ರವಲ್ಲ ಎಲ್ಲರಿಗೂ ಅನ್ವಯಿಸುತ್ತದೆ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ, ಸಹಕಾರ ನೀಡಲಾಗುವುದು ಎಂದು ಹೇಳಿದರು.
ನಂತರ ರೈತ ಹೋರಾಟಗಾರರು ಪ್ರತಿಭಟನೆ ಹಿಂಪಡೆದರು. ಪ್ರಹ್ಲಾದ ಮುದರಡ್ಡಿ, ಪ್ರವೀಣ ಬಂಡಿವಾಡ, ಅಶೋಕ ನೀರಲಗಿ, ಗುರಪ್ಪ ಚವರಡ್ಡಿ, ಲಚ್ಚವ್ವ ಜ್ಯೋತಣ್ಣವರ, ಅನಸಮ್ಮ ಶಿಂಧೆ, ರತ್ನವ್ವ ಸವಳಬಾವಿ, ಗಂಗವ್ವ ಹಡಪದ ಸೇರಿದಂತೆ ಕಿರೇಸೂರ, ಬ್ಯಾಹಟ್ಟಿ, ಹೆಬಸೂರ, ಕುಸುಗಲ್ಲ ಹಾಗೂ ನರಗುಂದ ಭಾಗದ ರೈತರು ಪಾಲ್ಗೊಂಡಿದ್ದರು.