Advertisement

“ಕೃಷಿ ವಿದ್ಯಾರ್ಥಿಗಳು ಆದರ್ಶ ರೈತರಾಗಬೇಕು’

05:21 PM Oct 31, 2021 | Team Udayavani |

ಸುರಪುರ: ಕೃಷಿ ನಮ್ಮ ಮೂಲ ಕಸುಬು. ಕೃಷಿ ಉಳಿದರೆ ದೇಶ ಉಳಿದೀತು ಅನ್ನುವ ಹಾಗೇ ದೇಶದ ಪ್ರಗತಿಯಲ್ಲಿ ಕೃಷಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಕೃಷಿ ಮಹಾವಿದ್ಯಾಲಯ ಕೃಷಿ ಉತ್ಸವ ಏರ್ಪಡಿಸುವ ಮೂಲಕ ರೈತರನ್ನು ಉತ್ತೇಜಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜೆಪಿ ಯುವ ಮುಖಂಡ ಶಂಕರ ನಾಯಕ ಹೇಳಿದರು.

Advertisement

ಕವಡಿಮಟ್ಟಿ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಬೀಮರಾ ಯನಗುಡಿ ಕೃಷಿ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಕೃಷಿ ಉತ್ಸವ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ಆರ್ಥಿಕ ವಲಯ ಮತ್ತು ಆಹಾರ ಉತ್ಪಾದನೆಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಕೃಷಿ ವಿಜ್ಞಾನಿಗಳು ಸುಧಾರಿತ ಬೇಸಾಯವನ್ನು ರೈತರಿಗೆ ಪರಿಚಯಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವೈ.ಎಸ್‌. ಅಮರೇಶ, ಕೃಷಿ ಮಹಾವಿದ್ಯಾಲಯದ ಡೀನ್‌ ಡಾ| ಚನ್ನಬಸಣ್ಣ, ದೇವತ್ಕಲ್‌ ಗ್ರಾಮದ ಪ್ರಗತಿಪರ ರೈತ ಬೀಮರಾಯ ಮೂಲಿಮನಿ ಮಾತನಾಡಿದರು.

ಎರೆಹುಳು ಗೊಬ್ಬರ ತಯಾರಿಕಾ ವಿಧಾನ, ಮಣ್ಣಿನ ಪರೀಕ್ಷೆ, ರೇಷ್ಮೆ ಕೃಷಿ, ಜೇನು ಸಾಕಾಣಿಕೆ, ಕೀಟ ನಿರ್ವಹಣೆ ಸೇರಿದಂತೆ ವಿದ್ಯಾರ್ಥಿಗಳು ತಯಾರಿಸಿದ ಕೃಷಿ ಯಂತ್ರ ಸೇರಿದಂತೆ ಇತರೆ ಕೃಷಿ ವಸ್ತುಗಳ ಪ್ರದರ್ಶನ ಮಾಡಲಾಯಿತು. ವಿವಿಧ ಗ್ರಾಮಗಳ ರೈತರು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ವಸ್ತು ಪ್ರದರ್ಶನ ವೀಕ್ಷಿಸಿದರು. ಮಕ್ಕಳ ವೈದ್ಯ ಡಾ| ಮುಕುಂದ ಯನಗುಂಂಟಿ, ಗ್ರಾಪಂ ಅಧ್ಯಕ್ಷ ನೀಲಮ್ಮ, ಉಪಾಧ್ಯಕ್ಷ ವೆಂಕೋಬ, ಡಾ| ಮೋಹನ ಚವ್ಹಾಣ, ಡಾ| ಪಾಲಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next