Advertisement

ರೈತ ಸಾರಥಿ ಯೋಜನೆ ಟ್ರ್ಯಾಕ್ಟರ್‌ ಚಾಲಕರಿಗೆ ವರದಾನ

01:21 PM Sep 18, 2017 | |

ಧಾರವಾಡ: ಕೃಷಿಗೆ ಬಳಕೆಯಾಗುವ ಟ್ರ್ಯಾಕ್ಟರ್‌ ಚಾಲನೆ ಮಾಡುವ ಎಲ್ಲಾ ರೈತರು ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳುವ ಅಗತ್ಯವಿದೆ ಎಂದು ಸಚಿವ ವಿನಯ್‌ ಕುಲಕರ್ಣಿ ಹೇಳಿದರು. ಹೆಬ್ಬಳ್ಳಿಯಲ್ಲಿ ರೈತ ಸಾರಥಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ಸಾರಿಗೆ ಇಲಾಖೆ ಕೃಷಿಕರ ಮನೆ ಬಾಗಿಲಿಗೆ ತೆರಳಿ ಟ್ರ್ಯಾಕ್ಟರ್‌ ಚಾಲನೆ ತರಬೇತಿ ಹಾಗೂ ಲೈಸೆನ್ಸ್‌ ಒದಗಿಸುತ್ತಿದೆ. ರೈತರಿಗೆ ಈ ಯೋಜನೆ ವರದಾನವಾಗಿದೆ. ಮೇ ತಿಂಗಳಿನಲ್ಲಿ ರಾಜ್ಯ ಸರಕಾರ ಈ ಯೋಜನೆ ರೂಪಿಸಿ ಪ್ರಾದೇಶಿಕ ಸಾರಿಗೆ ಇಲಾಖೆಗೆ ಆದೇಶ ಹೊರಡಿಸಿದೆ ಎಂದರು. 

ಹೆಬ್ಬಳ್ಳಿಯ ಶ್ರೀ ಮೂಗ ಬಸವೇಶ್ವರ ಯಾತ್ರಿ ನಿವಾಸದ ಮೇಲಂತಸ್ತಿನಲ್ಲಿ ಕಟ್ಟಡ ನಿರ್ಮಿಸಲು 40 ಲಕ್ಷ ರೂ. ಮಂಜೂರು ಮಾಡಲಾಗಿದೆ. ಮಲಪ್ರಭಾ ಬಲದಂಡೆ ಕಾಲುವೆ ದುರಸ್ತಿಗಾಗಿ ಸರ್ಕಾರ 11 ಕೋಟಿ ರೂ. ಒದಗಿಸಿದೆ ಎಂದು ತಿಳಿಸಿದರು. ರೈತರಿಗೆ ಚಾಲನಾ ಪರವಾನಗಿ ಹಾಗೂ ಅನುಜ್ಞಾ ಪತ್ರಗಳನ್ನು ಸಚಿವರು ವಿತರಿಸಿದರು.

ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷೆ ರತ್ನವ್ವ ಸುಣಗಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ, ಜಿಪಂ ಸದಸ್ಯರಾದ ಚನ್ನಬಸಪ್ಪ ಮಟ್ಟಿ, ಕರಿಯಪ್ಪ ಮಾದರ್‌ ಇದ್ದರು. ಹಿರಿಯ  ಪ್ರಾದೇಶಿಕ ಸಾರಿಗೆ ಆಯುಕ್ತ ರವೀಂದ್ರಕವಲಿ ಸ್ವಾಗತಿಸಿದರು. ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಬಿ.ಪಿ. ಉಮಾಶಂಕರ ಪ್ರಾಸ್ತಾವಿಕ ಮಾತನಾಡಿದರು. ಸಾರಿಗೆ ನಿರೀಕ್ಷಕ ಪಿ.ಆರ್‌. ದೇಸಾಯಿ ವಂದಿಸಿದರು. 

ಸಂಚಾರಿ ಜನಸೇವಾ ಕೇಂದ್ರ ರಾಜ್ಯದಲ್ಲೇ ಮೊದಲ ಯತ್ನ
ಹುಬ್ಬಳ್ಳಿ:
ರಾಜ್ಯ ಸರಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತೆರಳಿ ಮನವರಿಕೆ ಮಾಡುವ ಹಾಗೂ ಅಗತ್ಯ ಸಹಕಾರ ಕಲ್ಪಿಸಲು ಆರಂಭಿಸಿರುವ ಸಂಚಾರಿ ಜನಸೇವಾ ಕೇಂದ್ರ ರಾಜ್ಯದಲ್ಲೇ ಮೊದಲಾಗಿದ್ದು, ರಾಜ್ಯದೆಲ್ಲೆಡೆ ಆರಂಭಿಸುವ ಅವಶ್ಯಕತೆ ಇದೆ ಎಂದು ಸಚಿವ ವಿನಯ ಕುಲಕರ್ಣಿ ಹೇಳಿದರು. 

Advertisement

ಕೇಶ್ವಾಪುರ ನಾಗಶೆಟ್ಟಿಕೊಪ್ಪ ಹನುಮಂತ ದೇವರ ದೇವಸ್ಥಾನದ ಮುಂಭಾಗದಲ್ಲಿ ಡಾ| ಮಹೇಶ ನಾಲವಾಡ ನೇತೃತ್ವದಲ್ಲಿ ಸಂಚಾರಿ ಜನಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಡಾ| ಮಹೇಶ ನಾಲವಾಡ ಮಾತನಾಡಿ, ಜನರಿಗೆ ಸರಕಾರಿ ಕಚೇರಿಗಳಲ್ಲಿ ಆಗುವ ತೊಂದರೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದ್ದು, 15 ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು.

ವಿಪ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್‌ ಮುಖಂಡರಾದ ವಹಾಬ್‌ ಮುಲ್ಲಾ, ಮೋಹನ ಅಸುಂಡಿ, ದೇವಕಿ ಯೋಗಾನಂದ, ಬಂಗಾರೇಶ ಹಿರೇಮಠ, ಅಲ್ತಾಫ್ ಹಳ್ಳೂರ, ಹೋವಪ್ಪ  ದಾಯಗೋಡಿ, ನಾಗರಾಜ ಗೌರಿ, ಕಾಳುಸಿಂಗ ಚವ್ಹಾಣ, ಅಶ್ರಫ್, ಪೀರಾಜಿ ಖಂಡೇಕಾರ, ಸರೋಜಾ ಹೂಗಾರ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next