Advertisement

ದೆಹಲಿ ಹಿಂಸಾಚಾರ:ಆಸ್ಟ್ರೇಲಿಯಾದಿಂದ ಹಿಂದಿರುಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮೃತ ವ್ಯಕ್ತಿ

08:18 AM Jan 27, 2021 | Team Udayavani |

ನವದೆಹಲಿ: ಗಣರಾಜ್ಯೋತ್ಸವ ದಿನದಂದು (ಜ.26)  ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾರೂಪಕ್ಕೆ ತಿರುಗಿ ಓರ್ವ ಮೃತಪಟ್ಟಿದ್ದ. ಈತ ಇತ್ತೀಚಿಗಷ್ಟೇ ಆಸ್ಟ್ರೇಲಿಯಾದಿಂದ ಹಿಂದಿರುಗಿದ್ದು, ದೆಹಲಿ ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಕುರಿತಾಗಿ ಆತನ ಕುಟುಂಬಕ್ಕೆ ಮಾಹಿತಿಯೇ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮೃತ ವ್ಯಕ್ತಿಯನ್ನು 27 ವರ್ಷದ ನರ್ವೀತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದ. ರಾಂಪುರದ ಬಿಲಾಸ್ ಪುರ್ ಪ್ರದೇಶದಲ್ಲಿ ಹಲವಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೋಳ್ಳಲು ದೆಹಲಿಗೆ ತೆರಳಿದ್ದರು. 3 ದಿನಗಳ ಹಿಂದೆ ನರ್ವೀತ್ ಸಿಂಗ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಆದರೆ ಮಂಗಳವಾರ (ಜ.16) ನಡೆದ ರೈತ  ಪ್ರತಿಭಟನೆಯಲ್ಲಿ ಟ್ರ್ಯಾಕ್ಟರ್ ಮಗುಚಿ ಮೃತಪಟ್ಟಿದ್ದಾನೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಕೆಲವು ಪ್ರತಿಭಟನಾಕಾರ ರೈತರು ಟ್ರ್ಯಾಕ್ಟರ್ ಅನ್ನು ಅಡ್ಡಾದಿಡ್ಡಿಯಾಗಿ, ಪೊಲೀಸರನ್ನು ಬೆನ್ನಟ್ಟಲೆಂದೇ  ಚಲಾಯಿಸುತ್ತಿದ್ದರು.  ಈ ವೇಳೆ ಟ್ರ್ಯಾಕ್ಟರ್ ಒಂದು ಬ್ಯಾರಿಕೇಡ್ ಗೆ ಗುದ್ದಿ ಮಗುಚಿ ಬಿದ್ದಿತ್ತು. ಕೂಡಲೇ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಲು ಮುಂದಾಯಿತು. ಆದರೇ ರೈತರ ಗುಂಪು ಅವರನ್ನು ಸ್ಥಳಕ್ಕೆ ತೆರಳಲು ಬಿಡಲಿಲ್ಲ. ನರ್ವೀತ್ ಸಿಂಗ್ ಅಪಘಾತದಿಂದಲೇ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಆದರೇ ಪೊಲೀಸರ ಹೇಳಿಕೆಯನ್ನು ನಿರಾಕರಿಸಿದ ರೈತರು, ಟೀಯರ್ ಗ್ಯಾಸ್ ಪ್ರಯೋಗಿಸಿದ್ದರಿಂದಲೇ ಟ್ರ್ಯಾಕ್ಟರ್ ಮೇಲೆ ನಿಯಂತ್ರಣ ಕಳೆದುಕೊಂಡು ನರ್ವೀತ್ ಸಿಂಗ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next