ಶ್ರೀರಂಗಪಟ್ಟಣ: ಕಂದಾಯ ಸಚಿವ ಆರ್.ಅಶೋಕ್ ಕಾರಿಗೆ ಅಡ್ಡ ಮಲಗಿ ರೈತರು ಪ್ರತಿಭಟನೆ ನಡೆಸಿ ಹೈಡ್ರಾಮ ಮಾಡಿದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಇಂದು ಶ್ರೀರಂಗಪಟ್ಡಣದಲ್ಲಿ ನಡೆದ ಸಾಮೂಹಿಕ ತಿಥಿ ಕಾರ್ಯದಲ್ಲಿ ಪಾಲ್ಗೊಂಡು ಬಳಿಕ ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಸಚಿವ ಆರ್ ಅಶೋಕ್ ಭೇಟಿ ನೀಡಿದ ವೇಳೆ ರೈತ ಸಂಘ ಹಾಗೂ ದಸಂಸದ ಕಾರ್ಯಕರ್ತರು ದೇವಸ್ಥಾನದ ಮುಂಭಾಗ ಆಗಮಿಸಿ ಬಿಜೆಪಿ ಸ ರ್ಕಾರ ಕೊಲೆಗಡುಕ ಸರ್ಕಾರ, ಡೌನ್ ಡೌನ್ ಬಿಜೆಪಿ ಎಂದು ಘೋಷಣೆ ಕೂಗುತ್ತಾ ರೈತರನ್ನು ಕೊಲೆ ಮಾಡಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿ ಧರಣಿ ಕುಳಿತು,ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ದೇವಾಲಯದಿಂದ ಹೊರಗೆ ಬಂದ ಸಚಿ ವರು ಪ್ರತಿಭಟನಾಕಾರನನ್ನು ನಿರ್ಲಕ್ಷ್ತ ಮಾಡಿ ಕಾರು ಹತ್ತಿ ಹೊರಡಲು ಮುಂದಾದಾಗ ಸಚಿವರ ಕಾರು ಅಡ್ಡಗಟ್ಟಿದ ಪ್ರತಿಭಟನಾಕಾರರು.ಕಾರಿಗೆ ಅಡ್ಡ ಮಲಗಿ ಬಾಯಿ ಬಡಿದುಕೊಂಡು ಹೈಡ್ರಾಮ ಮಾಡಿದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರು ಸಾಕಷ್ಟು ಹರಸಾಹಸ ಪಟ್ಟರು.
ಈ ವೇಳೆ ಪೊಲೀಸರು, ಬಿಜೆಪಿ ಕಾ ರ್ಯಕರ್ತರು ಹಾಗೂ ಪ್ರತಿಭಟನಾಕಾರರು ನ ಡುವೆ ತಳ್ಳಾಟ ನೂಕಾಟ ಆರಂಭವಾಯಿತು. ಅಲ್ಲದೆ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿತ್ತು. ಅಲ್ಲದೆ ಅಶೋಕ್ ಕಾರಿಗೆ ಹಾನಿಗೊಳಿಸಿದರು. ಕೊನೆಗೆ ಕಾರಿನಿಂದ ಕೆಳಗಿಳಿದು ಬಂದ ಸಚಿವ ಅಶೋಕ್ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಸರ್ಕಾರಿ ಕಚೇರಿಗಳಲ್ಲಿ ಲಂಚ ಇಲ್ಲದೆ ಕೆಲಸ ನಡೆಯುತ್ತಿಲ್ಲ,ಭೂ ಸುಧಾರಣೆ ಕಾಯ್ದೆ ವಾಪಾಸ್ ಪಡೆಯುವುದು ಸೇರಿ ಮೈಷುಗರ್ ಕಾರ್ಖಾನೆ ಸರ್ಕಾರವೇ ನಡೆಸುವಂತೆ ಸಚಿವರಿಗೆ ಪ್ರತಿಭಟನಾಕಾರರು ಮನವಿ ಮಾಡಿದ್ರು. ಮನವಿ ಪಡೆದ ಬಳಿಕ ಸಚಿವರು ಅಲ್ಲಿಂದ ವಾಪಸ್ ತೆರಳಿದರು.