Advertisement

ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

01:35 PM Jul 17, 2019 | Suhan S |

ನವಲಗುಂದ: ಮಹದಾಯಿ ಹಾಗೂ ಕಳಸಾ, ಬಂಡೂರಿ ಯೋಜನೆಗಾಗಿ ನ್ಯಾಯಾಲಯದ ಆದೇಶದಂತೆ ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣವೇ ಅಧಿಸೂಚನೆ ಹೊರಡಿಸುವುದು, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ರೈತರು ಪಟ್ಟಣದ ಬಸ್‌ ನಿಲ್ದಾಣದ ಬಳಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

Advertisement

ರೈತ ಮುಖಂಡ ಸುಭಾಸಚಂದ್ರಗೌಡ ಮಾತನಾಡಿ, ಮಹದಾಯಿ ವಿಚಾರದಲ್ಲಿ ಸರಕಾರ ನ್ಯಾಯಾಲಯದ ಆದೇಶವನ್ನು ಪಾಲಿಸಿ ಕಾಮಗಾರಿ ಪ್ರಾರಂಭಿಸಬೇಕು. ಸಾಲಮನ್ನಾ ಅವೈಜ್ಞಾನಿಕವಾಗಿದ್ದು ಕೆಲವೇ ರೈತರಿಗೆ ಅನುಕೂಲವಾಗಿದೆ. ಚಾಲ್ತಿ ರೈತನಿಗೂ ಇದರ ಅನುಕೂಲತೆ ಸಿಗಲಿ ಎಂದರು.

ರೈತ ಮುಖಂಡರಾದ ಮಲ್ಲೇಶ ಉಪ್ಪಾರ ಮತ್ತು ರಘುನಾಥ ನಡುವಿನಮನಿ ಮಾತನಾಡಿ, ರೈತರ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು. ಮಹದಾಯಿ ಹೋರಾಟದಲ್ಲಿ ಜೈಲು ಸೇರಿ ಬಂದ ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು. ಶಾಸಕರು ರೈತರ ಸಮಸ್ಯೆ ಆಲಿಸುವುದನ್ನು ಬಿಟ್ಟು ರೆಸಾರ್ಟ್‌ನಲ್ಲಿ ಲಕ್ಷಾನುಗಟ್ಟಲೇ ಹಣ ಖರ್ಚು ಮಾಡುತ್ತಿದ್ದಾರೆ. ರೈತರ ಸಮಸ್ಯೆ ಕೇಳುವವರಿಲ್ಲದಂತಾಗಿದೆ ಎಂದು ಹರಿಹಾಯ್ದರು.

ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ಶಿವಪ್ಪ ಸಂಗಳದ, ಯಲ್ಲರಡ್ಡಿ ವನಹಳ್ಳಿ, ಯಲ್ಲಪ್ಪ ದಾಟಿಬಾವಿ, ವಿಠuಲ ಗೊಣ್ಣಾಗರ, ಚನ್ನಯ್ಯ ಮಠಪತಿ, ಸಂಗಪ್ಪ ನಿಡವಣಿ, ಮಲ್ಲಯ್ನಾ ಪೂಜಾರ, ಹನುಮಂತಪ್ಪ ಬಣ್ಣೇನ್ನವರ, ಗುರುಶಿದ್ದಪ್ಪ ಕಾಲುಂಗುರ, ಹುಸೇನಸಾಬ ನದಾಫ, ಸಿದ್ದಲಿಮಗಪ್ಪ ಹಳ್ಳದ, ಅಲ್ಲಾಭಕ್ಷ ಹಂಚಿನಾಳ, ಸಿದ್ದಪ್ಪ ಮುಪ್ಪಯ್ಯನವರ, ಮಲ್ಲಪ್ಪ ಬಸೆಗೊಣ್ಣವರ, ಸಾಯಿಬಾಬ ಆನೇಗುಂದಿ ರವಿಗೌಡ ಪಾಟೀಲ, ಅಲ್ಲಾಭಕ್ಷ ಕಲ್ಲಕೊಟ್ರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next