ಮುಖ್ಯಮಂತ್ರಿ ಮನೆ ಮುಂದೆ ಧರಣಿಗೆ ಅಖಂಡ ಕರ್ನಾಟಕ ರೈತ ಸಂಘ ನಿರ್ಧರಿಸಿದೆ.
ನಗರದಲ್ಲಿ ಜರುಗಿದ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತರು ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ತೀವ್ರವಾಗಿದ್ದು ಸೂಕ್ತ ಕಾನೂನು ತಿದ್ದುಪಡಿ ಮಾಡಿ ದಾರಿ ಮಾಡಿಕೊಡುವ ಅಧಿಕಾರವನ್ನು ತಹಶೀಲ್ದಾರ್‌ರಿಗೆ ನೀಡಬೇಕು. ಈ ಕುರಿತು ಮಾಡಿಕೊಂಡ ಮನವಿಗೆ ಸರ್ಕಾರ ಸ್ಪಂದಿಸದ ಕಾರಣ ರಾಜ್ಯಾದ್ಯಂತ ಹೋರಾಟ ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ಲದೇ ಫೆ. 4ರಂದು ಮುಖ್ಯಮಂತ್ರಿ ನಿವಾಸದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ .
Advertisement
ಸಭೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ರಾಜ್ಯ ಉಪಾಧ್ಯಕ್ಷ ಬಿ.ಸಿ. ಪಾಟೀಲ, ಶ್ಯಾಮಸುಂದರ ಕೀರ್ತಿ, ಮಂಡ್ಯ ಜಿಲ್ಲಾಧ್ಯಕ್ಷ ಮುರುಗೇಂದ್ರಯ್ಯ ನಂದಿತಾವರೆ, ವಿಜಯಪುರ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಮೈಸೂರಿನ ಕೆಂಪಮ್ಮ, ಶೋಭಾ, ಡಾ| ಎಂ.ರಾಮಚಂದ್ರ ಬಮ್ಮನಜೋಗಿ, ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಗಿರೀಶ ಹಿರೇಮಠ, ದೋಂಡಿಬಾ ಪವಾರ, ಮುದ್ದುಗೌಡ ಪಾಟೀಲ, ಸುಭಾಷ್ ಬಿಸಿರೊಟ್ಟಿ, ವಿಠuಲ ಅಮಾತೆಗೌಡರ, ಮಹಾಂತೇಶ ಅಂಬಲಿ, ಚಂದ್ರಾಮ ತೆಗ್ಗಿ, ಸೋಮನಗೌಡ ಪಾಟೀಲ, ಗೋಲ್ಲಾಳಪ್ಪ ಚೌಧರಿ, ಹೊನಕೇರೆಪ್ಪ ತೆಲಗಿ , ಈರಪ್ಪ ತೇಲಿ, ಕಮಲಾಬಾಯಿ ಕೋಟ್ಯಾಳ, ಜಯಶ್ರೀ ಜಂಗಮಶೆಟ್ಟಿ ಇದ್ದರು.