Advertisement

Protest: ಕಾರ್ಖಾನೆಗೆ ಭೂಮಿ ಕೊಟ್ಟ ರೈತರಿಂದ ರಸ್ತೆಗಾಗಿ ಪ್ರತಿಭಟನೆ

03:49 PM Feb 26, 2024 | Team Udayavani |

ವಾಡಿ: ಸಿಮೆಂಟ್ ಕಂಪನಿಗೆ ಸಾವಿರಾರು ಎಕರೆ ಭೂಮಿ ಬರೆದು ಕೊಟ್ಟ ರೈತರು, ಗ್ರಾಮಕ್ಕೆ ರಸ್ತೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಸೋಮವಾರ ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆಯಿತು.

Advertisement

ವಾಡಿ ನಗರದಿಂದ ಇಂಗಳಗಿ ಗ್ರಾಮಕ್ಕೆ ಕೊಡುವ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಎಸಿಸಿ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದ ಇಂಗಳಗಿ ಗ್ರಾಮಸ್ಥರು, ಕಳೆದ 50 ವರ್ಷದಿಂದ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಿಲ್ಲ. ಐದು ದಶಕಗಳ ಹಿಂದೆ ನಿರ್ಮಿಸಲಾದ ಸಿಸಿ ರಸ್ತೆ ಈಗ ಬಿರುಕು ಬಿಟ್ಟು ನಿಂತಿದೆ. ವಾಹನ ಸವಾರರು ನರಕಾಯತನೇ ಅನುಭವಿಸುತ್ತಿದ್ದಾರೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ವೇಳೆ, ಅನೇಕ ಜನರು ಬೈಕ್ ಅಪಘಾತಕ್ಕೆ ಗುರಿಯಾಗಿದ್ದಾರೆ. ರಸ್ತೆಯಲ್ಲಿ ಬಿದ್ದ ಅನೇಕರು ಕೈಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನು ಮೂಳೆ ಕಾಲು ಮೂಳೆ ಮುರಿದುಕೊಂಡು ಅನೇಕ ಜನ ಅಂಗವಿಕಲರಂತೆ ಬದುಕುತ್ತಿದ್ದಾರೆ. ಕಲ್ಲು ಗಣಿಗಾರಿಕೆ ನಡೆಸಲು ಸಾವಿರಾರು ಎಕರೆ ಭೂಮಿ ಕರಿದಿರಿಸಿರುವ ಎಸಿಸಿ ಕಂಪನಿ ಗ್ರಾಮಸ್ಥರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿಪಡಿಸದಿರುವುದು ಕಾನೂನು ಉಲ್ಲಂಘನೆಯಾಗಿದೆ. 15 ದಿನಗಳೊಳಗಾಗಿ ರಸ್ತೆ ನಿರ್ಮಿಸದಿದ್ದರೆ ಕಂಪನಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣ ಗುಡುಬಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖಂಡರಾದ ಬಸವರಾಜ್ ಸ್ಥಾವರಮಠ ಡಾ. ಮೋಹನ್ ಪವರ್, ಸೇರಲಿ ದುದನಿ, ನಬಿ ಪಟಾಣ, ಶಿವಕುಮಾರ್ ಹೂಗಾರ್, ನಾಗರಾಜ್ ಸಾಲಿಮಠ, ಶಿವಕುಮಾರ್ ಚಳಗೇರಿ, ಮಲ್ಲಿಕಾರ್ಜುನ ಸೀಮಿ, ಗಿಡ್ಡಮ್ಮ ಪವಾರ್, ಶಾಣಿ ಬಾಯಿ ರಾಥೋಡ್, ಮೆಹಬೂಬ್ ಬಾಷಾ, ಭಿಮಾಶಂಕರ್ ಗೋಳೇದ್ ಸೇರಿದಂತೆ ಗ್ರಾಮದ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಜನಪ್ರಿಯವಾಗಿದ್ದ ನಟನೆ ಬಿಟ್ಟು ಡಾಬಾದಲ್ಲಿ ತಟ್ಟೆ ತೊಳೆಯುವ ಕೆಲಸಕ್ಕೆ ಸೇರಿದ್ದ ಖ್ಯಾತ ನಟ

Advertisement

Udayavani is now on Telegram. Click here to join our channel and stay updated with the latest news.

Next