ನವದೆಹಲಿ: ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ 25 ದಿನ ಪೂರೈಸಿದ್ದು, ಪ್ರತಿಭಟನೆ ನಡೆಯುತ್ತಿರುವ ಎಲ್ಲ ಪ್ರದೇಶಗಳಲ್ಲೂ ರೈತರು ಸೋಮವಾರ ಒಂದು ದಿನದ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಅಲ್ಲದೆ, ಡಿ.25ರಿಂದ 27ರವರೆಗೆ ಹರ್ಯಾಣದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು
ತಡೆಯುವುದಾಗಿಯೂ ಘೋಷಿಸಿದ್ದಾರೆ.
ಸಿಂಘು ಗಡಿಯಲ್ಲಿ ಭಾನುವಾರ ಸಂಜೆ ನಡೆದ ಸುದ್ದಿಗೋಷ್ಠಿ ಯಲ್ಲಿ ಸ್ವರಾಜ್ ಇಂಡಿಯಾ ಸ್ಥಾಪಕ ಯೋಗೇಂದ್ರ ಯಾದವ್ ಈ ಘೋಷಣೆ ಮಾಡಿದ್ದಾರೆ. ಡಿ.23ರಂದು ಕಿಸಾನ್ ದಿವಸ್ ಆಚರಿಸಲು ನಿರ್ಧರಿಸಿದ್ದು, ಅಂದು ದೇಶವಾಸಿಗಳು ದಿನದ ಒಂದು ಹೊತ್ತು ಆಹಾರ ಸೇವಿಸದೇ ಬೆಂಬಲ ನೀಡಬೇಕು ಎಂದು ರೈತರು ಕೋರಿದ್ದಾರೆ.
ಪ್ರತಿಭಟನೆ ವೇಳೆ ಮೃತಪಟ್ಟಿರುವ 30ಕ್ಕೂ ಹೆಚ್ಚು ಅನ್ನದಾತರ ಫೋಟೋಗಳನ್ನು ಇಟ್ಟು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಭಾನುವಾರ ಅನ್ನದಾತರು ಶ್ರದ್ಧಾಂಜಲಿ ದಿವಸ ಆಚರಿಸಿದ್ದಾರೆ. ಇದೇವೇಳೆ, ಪ್ರತಿಭಟನಾಕಾರ ರೈತರುಬಳಸುತ್ತಿದ್ದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಯನ್ನು ಭಾನುವಾರ ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ನಾಳೆ ಅಥವಾ ನಾಡಿದ್ದುಕೃಷಿ ಸಚಿವ ತೋಮರ್ ಅವರು ಪ್ರತಿಭಟನಾಕಾರ ರೈತರೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಿ, ಅವರ ಬೇಡಿಕೆಗಳಕುರಿತು ಚರ್ಚಿಸಲಿದ್ದಾರೆ.
● ಅಮಿತ್ ಶಾ, ಕೇಂದ್ರ ಗೃಹ ಸಚಿವ