ಶಹಾಬಾದ: ಕೇಂದ್ರ ಸರ್ಕಾರದ ರೈತ ವಿರೋಧಿ ಮತ್ತು ಕಾರ್ಪೋರೇಟ್ ಪರ ನೀತಿಗಳನ್ನು ಧಿಕ್ಕರಿಸಿ ದೆಹಲಿ ಚಲೋ ಹೋರಾಟಕ್ಕೆ ಒಂದು ತಿಂಗಳು ತುಂಬಿದ್ದು, ರೈತ-ಕೃಷಿ ಕಾರ್ಮಿಕರ ಸಂಘಟನೆಯ ತಾಲೂಕು ಸಮಿತಿ ವತಿಯಿಂದಹೊನಗುಂಟಾ ಗ್ರಾಮದಲ್ಲಿ ಧಿಕ್ಕಾರ ದಿನ ಚಳವಳಿಯಾಗಿ ಆಚರಿಸಿದರು.
ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಗಣಪತ್‌ರಾವ್.ಕೆ.ಮಾನೆ ಮಾತನಾಡಿ, ಕೇಂದ್ರ ಬಿ.ಜೆ.ಪಿ ಸರ್ಕಾರದ ರೈತ ವಿರೋಧಿ , ಕಾರ್ಮಿಕ ವಿರೋಧಿ ಮಸೂದೆ ಹಾಗೂ ರಾಜ್ಯದಲ್ಲಿ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಗಳು ಕಾರ್ಪೋರೇಟ್ ಮನೆತನಗಳಿಗಾಗಿ ಜಾರಿಗೊಳಿಸುತ್ತಿರುವುದನ್ನು ವಿರೋಧಿ ಸಿ ಇವುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.ಈ ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತ ಸಂಘಟನೆಗಳು ನಡೆಸುತ್ತಿರುವ ಬೃಹತ್‌ಆಂದೋಲನಕ್ಕೆ ಒಂದು ತಿಂಗಳಾದರು ಕೇಂದ್ರಸರ್ಕಾರ ರೈತರಿಗೆ ಸ್ಪಂದನೆ ನೀಡದೇ ಬಂಡವಾಳ ಶಾಹಿಗಳ ಏಜೆಂಟ್‌ರಾಗಿ ಕೆಲಸ ಮಾಡುತ್ತಿದೆ ಎಂದರು.
ದೆಹಲಿಯ ಕೊರೆಯುವ ಚಳಿಯಲ್ಲಿ 30 ದಿನಗಳಿಂದ ಬಿಡಾರ ಹೂಡಿರುವ ಉತ್ತರಭಾರತದ ಸುಮಾರು ಎರಡು ಕೋಟಿಗೂ ಅಧಿಕ ರೈತರು ಕೇಂದ್ರ ಸರ್ಕಾರದ ಕರಾಳ ರೈತ ವಿರೋಧಿ ಮಸೂದೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಈ ಹೋರಾಟ ಮುರಿಯಲು ಒಂದೆಡೆ ಕೇಂದ್ರ ಸರ್ಕಾರವು ಹರಸಾಹಸ ಮಾಡುತ್ತಾ ಎಲ್ಲಾಪ್ರಜಾತಾಂತ್ರಿಕ ರೂಢಿಗಳನ್ನು ಮಣ್ಣು ಮಾಡಿರೈತರ ಮೇಲೆ ದೌರ್ಜನ್ಯ ಎಸುತ್ತಿದ್ದಾರೆ. ಇನ್ನೊಂದೆಡೆ ಮೊನ್ನೆ ಸುಪ್ರೀಂ ಕೋರ್ಟ್‌ರೈತರ ಹೋರಾಟದ ಕುರಿತು ತನ್ನ ಅನುಕಂಪವ್ಯಕ್ತಪಡಿಸಿ ರೈತರ ಹೋರಾಟದ ಹಕ್ಕನ್ನು ಎತ್ತಿಹಿಡಿದಿದೆ. ಸರ್ಕಾರವು ರೈತ ನಾಯಕರೊಂದಿಗೆ6-7 ಸುತ್ತಿನ ಮಾತುಕತೆಯ ನಂತರ ತನ್ನ ಬಂಡವಾಳಶಾಹಿಗಳ ಪರವಾದ ನಿಷ್ಠೆಮುಂದುವರಿಸುತ್ತಾ ರೈತರೊಂದಿಗಿನ ಮೊಂಡುತನ ಪ್ರದರ್ಶಿಸಿದೆ. ಅಲ್ಲದೆ ದೇಶಪ್ರೇಮಿ ರೈತರಿಗೆ ಕಳಂಕ ಹಚ್ಚುವ ಅನೈತಿಕ ಕೆಲಸ ಮಾಡುತ್ತಿದೆ. ಈ ಕರಾಳ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸುವವರೆಗೂ ನಾವು ಯಾವ ಬೆಲೆ ಕೊಟ್ಟಾದರೂ ಹೋರಾಡುತ್ತೇವೆ. ಸಾವನ್ನೂ ಎದುರಿಸುತ್ತೇವೆ ಎಂದು ದೆಹಲಿಯಲ್ಲಿ ರೈತರು ತಮ್ಮ ದೃಢಸಂಕಲ್ಪ ಎತ್ತಿ ಹಿಡಿದಿದ್ದು ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕು ಎಂದರು.
ಜಗನ್ನಾಥ.ಎಸ್.ಎಚ್, ಗುಂಡಮ್ಮ ಮಡಿವಾಳ, ತಿಮ್ಮಯ್ಯ.ಬಿ.ಮಾನೆ, ನೀಲಕಂಠ.ಎಂ.ಹುಲಿ, ತುಳಜರಾಮ.ಎನ್.ಕೆ, ರಮೇಶದೇವಕರ, ಪ್ರವೀಣ, ಕಿರಣ್, ರಾಜೇಂದ್ರಅತನೂರ ಸೇರಿ ಹಲವಾರು ರೈತರು ಭಾಗವಹಿಸಿದ್ದರು.