ಮುಧೋಳ: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಸಮೀಪದ ಉತ್ತೂರು ಗ್ರಾಮದ ರೈತಮುಖಂಡರು ಗ್ರಾಮದ ಹೊರವಲಯದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದ ಎದುರು ಮಧ್ಯರಾತ್ರಿಯಿಂದ ಪ್ರತಿಭಟನೆ ಆರಂಭಿಸಿದ್ದಾರೆ.
ರೈತ ನಿಂಗಪ್ಪ ಇಟ್ಟನ್ನವರ ಮಾತನಾಡಿ, ರೈತರಿಗೆ ಕನಿಷ್ಠ 350 ವೋಲ್ಟೇಜ್ ವಿದ್ಯುತ್ ಅವಶ್ಯಕತೆಯಿದ್ದರೂ ಅಧಿಕಾರಿಗಳು ಮಾತ್ರ ಕೇವಲ 250ರಿಂದ 270 ವೋಲ್ಟೇಜ್ ವಿದ್ಯುತ್ ನೀಡುತ್ತಿದ್ದಾರೆ ಇದರಿಂದಾಗಿ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಕಳಪೆ ವಿದ್ಯುತ್ ನಿಂದಾಗಿ ಪಂಪ್ ಸೆಟ್ ಗಳಿಗೆ ಹೆಚ್ಚಿನ ಹಾನಿಯುಂಟಾಗುತ್ತಿದೆ. ಅಧಿಕಾರಿಗಳು ಕೂಡಲೇ ಸಮರ್ಪಕ ಹಾಗೂ ನಿಯಮಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಮೊದಲು ನಿರಂತರವಾಗಿ 7ಗಂಟೆಗಳ ಕಾಲ 3ಫೇಸ್ ವಿದ್ಯುತ್ ನೀಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವ್ಯತ್ಯಯವುಂಟಾಗುತ್ತಿದೆ. ಅಧಿಕಾರಿಗಳ ಈ ನೀತಿಯಿಂದಾಗಿ ಬೆಳೆಗಳು ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಅನುಕೂಲಕ್ಕಾಗಿ 7ಗಂಟೆ 3 ಫೇಸ್ ಹಾಗೂ 4 ಗಂಟೆ ಸಿಂಗಲ್ ಫೇಸ್ ವಿದ್ಯುತ್ ವಿತರಿಸಬೇಕು ಎಂದು ಒತ್ತಾಯಿಸಿದರು.
ಸ್ಥಕಳಕ್ಕೆ ಅಧಿಕಾರಿಗಳ ಭೇಟಿ : ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆ ಕುರಿತು ಆಲಿಸಿದರು. ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: SS Rajamouli: ಪ್ರಭಾಸ್ ʼಕಲ್ಕಿ 2898 ಎಡಿʼ ಸಿನಿಮಾದಲ್ಲಿ ರಾಜಮೌಳಿ ನಟನೆ?